ನವದೆಹಲಿ: ಎರಡನೆಯ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಯವರು ತಮ್ಮ ಮೊದಲ ವಿದೇಶಿ ಪ್ರಯಾಣಕ್ಕೆ ಸಜ್ಜಾಗಿದ್ದಾರೆ. ಇಂದು ಅವರು ಮಾಲ್ಡೀವ್ಸ್ಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಸಂಸತ್ತು ಮಜಿಲಿಸ್ ಅನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. 2011ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ದ್ವಿಪಕ್ಷೀಯ ಭೇಟಿಯ ಬಳಿಕ ಈ ದ್ವೀಪ ರಾಷ್ಟ್ರಕ್ಕೆ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಗಳು ದ್ವಿಪಕ್ಷೀಯವಾಗಿ ಭೇಟಿ ನೀಡುತ್ತಿದ್ದಾರೆ.
ಕಳೆದ ವರ್ಷ, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಸೊಲಿಹ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮೋದಿಯವರು ತೆರಳಿದ್ದರು. ಆದರೆ, ಇದು ಪೂರ್ಣ ಪ್ರಮಾಣದ ದ್ವಿಪಕ್ಷೀಯ ಭೇಟಿ ಆಗಿರಲಿಲ್ಲ.
ಭೇಟಿಗೂ ಮುನ್ನ, ಶುಕ್ರವಾರ ನರೇಂದ್ರ ಮೋದಿಯವರು ತನ್ನನ್ನು ಆಹ್ವಾನಿಸಿದ ಸೊಲಿಹ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದು, ಭಾರತ ನೆರೆಹೊರೆ ಮೊದಲು ನಿಯಮಕ್ಕೆ ಬದ್ಧವಾಗಿದೆ ಎಂಬುದನ್ನು ಪುನರುಚ್ಚರಿಸಿದ್ದಾರೆ. “ಇತಿಹಾಸ ಮತ್ತು ಸಂಸ್ಕೃತಿಯ ಆಳವಾದ ಬಾಂಧವ್ಯವನ್ನು ಹಂಚಿಕೊಂಡಿರುವ ಮಾಲ್ಡೀವ್ಸ್ ಅನ್ನು ಭಾರತ ಅತ್ಯಂತ ಮೌಲ್ಯದಾಯಕ ಪಾಲುದಾರನಾಗಿ ನೋಡುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
ಮೋದಿ ಮತ್ತು ಸೊಲಿಹ್ ಅವರು ಮಹತ್ವದ ಕರಾವಳಿ ವಿಚಕ್ಷಣ ರೇಡಾರ್ ವ್ಯವಸ್ಥೆ, ರಕ್ಷಣಾ ಪಡೆಗಳ ತರಬೇತಿ ಕೇಂದ್ರವನ್ನು ಮಾಲ್ಡೀವ್ಸ್ನಲ್ಲಿ ಉದ್ಘಾಟನೆಗೊಳಿಸಲಿದ್ದಾರೆ.
ಪ್ರಾದೇಶಿಕವಾಗಿ ಚೀನಾದ ಪ್ರಾಬಲ್ಯವನ್ನು ತೊಡೆದು ಹಾಕುವಲ್ಲಿ ಮೋದಿಯವರ ಮಾಲ್ಡೀವ್ಸ್ ಭೇಟಿ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಾಲ್ಡೀವ್ಸ್ ಭೇಟಿ ನಂತರ ಶ್ರೀಲಂಕಾಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.