ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಿದೆ. ಹೆಚ್ಚಿನ ಕುಟುಂಬಗಳಿಗೆ ಈ ಯೋಜನೆಯ ಫಲವನ್ನು ನೀಡಲು ಮತ್ತು 5 ಕೆಜಿ ತೂಕದ ಅಡುಗೆ ಅನಿಲಗಳ ಬಳಕೆಯನ್ನು ಉತ್ತೇಜಿಸಲು ಅದು ಕಾರ್ಯೋನ್ಮುಖಗೊಂಡಿದೆ.
ಉಜ್ವಲ ಯೋಜನೆಯು 2016ರಲ್ಲಿ ಉತ್ತರಪ್ರದೇಶದಲ್ಲಿ ಅಧಿಕೃತವಾಗಿ ಆರಂಭಗೊಂಡಿತು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಈ ಯೋಜನೆಯಡಿ ಉಚಿತವಾಗಿ ಕಲ್ಪಿಸಲಾಗುತ್ತದೆ.
ಇದುವರೆಗೆ ಯೋಜನೆಯು 71.9 ಮಿಲಿಯನ್ ಜನರನ್ನು ತಲುಪಿದೆ, 80 ಮಿಲಿಯನ್ ಟಾರ್ಗೆಟ್ ಮೋದಿ ಸರ್ಕಾರ-2 ಗೆ 100 ದಿನ ಪೂರೈಸುವುದರಲ್ಲಿ ಟಾರ್ಗೆಟ್ ತಲುಪುವ ನಿರೀಕ್ಷೆ ಇದೆ.
ಟಾರ್ಗೆಟ್ ತಲುಪಿದ ಬಳಿಕ ಯೋಜನೆಯಡಿ 5 ಕೆಜಿ ಸಿಲಿಂಡರ್ ಕಡ್ಡಾಯಗೊಳಿಸುವ ನಿರೀಕ್ಷೆ ಇದೆ. ಕಡಿಮೆ ದರದಲ್ಲಿ ಈ ಸಿಲಿಂಡರ್ ದೊರೆಯುವುದರಿಂದ ಬಡ ಕುಟುಂಬಗಳಿಗೆ ರಿಫಿಲ್ಲಿಂಗ್ ಸುಲಭವಾಗಲಿದೆ. ದೆಹಲಿಯಲ್ಲಿ ಪ್ರಸ್ತುತ ಇದರ ದರ ರೂ. 250 ಆಗಿದ್ದು, 80 ರೂಪಾಯಿ ಸಬ್ಸಿಡಿ ಸಿಗಲಿದೆ. ಕುಟುಂಬದ ಮಹಿಳೆಯ ಹೆಸರಿನಲ್ಲಿ ಕನೆಕ್ಷನ್ ಒದಗಿಸಲಾಗುತ್ತದೆ.
ಮಹಿಳೆಯರ ಆರೋಗ್ಯ ಮತ್ತು ಶುದ್ಧ ಪರಿಸರವನ್ನು ನಿರ್ಮಾಣ ಮಾಡುವ ಗುರಿಯೊಂದಿಗೆ ಉಜ್ವಲ ಯೋಜನೆಯನ್ನು ಹೊರತರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.