ನವದೆಹಲಿ: ಅತೀ ಶೀಘ್ರದಲ್ಲೇ ಮುಂಬಯಿ ಮತ್ತು ಅಹ್ಮದಾಬಾದ್ ನಡುವೆ ಭಾರತದ ಮೊತ್ತ ಮೊದಲ ಬುಲೆಟ್ ರೈಲು ಪ್ರಯಾಣಿಸಲಿದೆ. ದೇಶದ ಇತಿಹಾಸದಲ್ಲೇ ಅತ್ಯಂತ ಮೈಲಿಗಲ್ಲಿನ ಸಾಧನೆ ಇದಾಗಲಿದ್ದು, ಬುಲೆಟ್ ರೈಲಿನ ಓಡಾಟಕ್ಕಾಗಿ ಸಮಸ್ತ ಭಾರತೀಯರು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಈ ಬುಲೆಟ್ ರೈಲಿಗೊಂದು ಚಂದದ ಹೆಸರು ಬೇಕಾಗಿದೆ. ಇದಕ್ಕಾಗಿಯೇ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ ಸಾರ್ವಜನಿಕರಿಂದಲೇ ಹೆಸರನ್ನು ಆಹ್ವಾನಿಸುತ್ತಿದೆ.
ಫೆಬ್ರವರಿಯಲ್ಲಿ mygov.in ಮೂಲಕ ಬುಲೆಟ್ ರೈಲಿಗೆ ಹೆಸರು ಸೂಚಿಸುವಂತೆ ಕೋರಲಾಗಿತ್ತು, ಮಾತ್ರವಲ್ಲ ಮಾಸ್ಕೋಟ್ ವಿನ್ಯಾಸಪಡಿಸುವ ಅವಕಾಶವನ್ನೂ ನೀಡಲಾಗಿತ್ತು. ಇದಕ್ಕೆ ಬಹುಮಾನ ನೀಡುವುದಾಗಿಯೂ ಘೋಷಣೆ ಮಾಡಲಾಗಿತ್ತು. ಮೇ 25 ಇದಕ್ಕೆ ಕೊನೆಯ ದಿನಾಂಕವಾಗಿತ್ತು.
ಇದುವರೆಗೆ ಸಾರ್ವಜನಿಕರಿಂದ ಬುಲೆಟ್ ರೈಲಿಗೆ ಸುಮಾರು 22 ಸಾವಿರ ಹೆಸರುಗಳು ಬಂದಿವೆ. 4,400 ಮಾಸ್ಕೋಟ್ಗೆ ಎಂಟ್ರಿಗಳು ಬಂದಿವೆ.
ಉದಂತಶ್ತರಿ, ಮಹಾತ್ಮ, ಬುಲೆಟ್ ಭಾರತ್, ವಿದ್ಯುತ್, ಅಶ್ವಮೇಧ, ಪವನ ಪುತ್ರ, ಚೇತಕ್, ವಾಯುಪುತ್ರ ಮುಂತಾದ ಹೆಸರುಗಳು ಸಾರ್ವಜನಿಕರಿಂದ ಬಂದಿವೆ. ಪುಲ್ವಾಮ ದಾಳಿಯ ಸ್ಮರಣಾರ್ಥ ‘ಪುಲ್ವಾಮ ಶಹೀದ್ ಎಕ್ಸ್ಪ್ರೆಸ್’ ಎಂಬ ಹೆಸರಿಡಿ ಎಂದೂ ಒಬ್ಬರು ಮನವಿ ಮಾಡಿದ್ದಾರೆ.
ರಾಜಕಾರಣಿಗಳಿಗೆ ಸಂಬಂಧಿಸಿದ ಹೆಸರನ್ನು ಸ್ವೀಕಾರ ಮಾಡುವುದಿಲ್ಲ ಎಂದು ಮೊದಲೇ ಹೇಳಲಾಗಿತ್ತು.
ಹೆಸರು ಸೂಚಿಸುವ ಸ್ಪರ್ಧೆಯಲ್ಲಿ ಗೆದ್ದವರಿಗೆ ರೂ. 50 ಸಾವಿರ ನಗದು ಮತ್ತು ಸರ್ಟಿಫಿಕೇಟ್ ಸಿಗಲಿದೆ. ಮಾಸ್ಕೋಟ್ ಸಲಹೆಯಲ್ಲಿ ರೂ.1 ಲಕ್ಷ ಬಹುಮಾನ ಸಿಗಲಿದೆ. ಅತ್ಯುತ್ತಮವಾದ 5 ಸಲಹೆಗಳಿಗೆ ರೂ, 10,000 ನಗದು ಪುರಸ್ಕಾರ ಎರಡೂ ಕೆಟಗರಿಯಲ್ಲಿ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.