ನವದೆಹಲಿ: ಮಥುರಾದಲ್ಲಿ ಅನಾಥ ಮತ್ತು ಅನಾರೋಗ್ಯ ಪೀಡಿತ ಗೋವುಗಳ ಪಾಲನೆ ಪೋಷಣೆ ಮಾಡುತ್ತಾ ಜೀವನ ಸಾಗಿಸುತ್ತಿರುವ ಜರ್ಮನ್ ಪ್ರಜೆ ಫ್ರೀಡೆರಿಕೆ ಇರಿನ ಬ್ರುನಿಂಗ್ ಅವರಿಗೆ ಭಾರತದಲ್ಲೇ ಇರಲು ಅವಕಾಶ ಸಿಕ್ಕಿದೆ. ಸರ್ಕಾರದ ಮಧ್ಯಪ್ರವೇಶದಿಂದಾಗಿ ಆಕೆ ಭಾರತದಲ್ಲಿ ವಾಸಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಆಕೆಯ ವೀಸಾ ಅವಧಿಯನ್ನು ವಿಸ್ತರಣೆಗೊಳಿಸಲಾಗಿದೆ.
ಗೋವುಗಳ ಸೇವೆ ಮಾಡುತ್ತಿರುವುದಕ್ಕಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನಿಸಲಾಗಿತ್ತು. ಭಾರತದಲ್ಲಿ ವಾಸಿಸಲು ನನಗೆ ಅವಕಾಶ ನೀಡದೇ ಹೋದರೆ ಪ್ರಶಸ್ತಿಯನ್ನು ವಾಪಾಸ್ ಮಾಡುವುದಾಗಿ ಅವರು ಬೆದರಿಕೆಯೊಡ್ಡಿದ್ದರು. ಇದಕ್ಕೆ ಟ್ವಿಟರ್ನಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಘಟನೆಯ ಬಗ್ಗೆ ವರದಿ ಕೇಳಿರುವುದಾಗಿ ಹೇಳಿಕೊಂಡಿದ್ದರು.
ಇದೀಗ ಬ್ರೂನಿಂಗ್ ಅವರು ತಮ್ಮ ವೀಸಾ ವಿಸ್ತರಣೆಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
25 ವರ್ಷಗಳ ಹಿಂದೆ ಭಾರತಕ್ಕೆ ಬಂದಿರುವ ಬ್ರೂನಿಂಗ್ ಅವರು ತ್ಮ ಸ್ವಂತ ಹಣದಲ್ಲಿ ಮಥುರಾದಲ್ಲಿ ಗೋಶಾಲೆಯನ್ನು ನಡೆಸುತ್ತಿದ್ದಾರೆ. ಇದಕ್ಕಾಗಿ ತಿಂಗಳಿಗೆ $45,000 ಸ್ವಂತ ಹಣವನ್ನು ಖರ್ಚು ಮಾಡುತ್ತಿದ್ದಾರೆ. ರಸ್ತೆಯಲ್ಲಿ ಅಪಘಾತಕ್ಕೀಡಾದ, ಕಣ್ಣು ಕಳೆದುಕೊಂಡ, ಪ್ಲಾಸ್ಟಿಕ್ ತಿಂದು ಅನಾರೋಗ್ಯಕ್ಕೊಳಗಾದಂತಹ ಗೋವುಗಳನ್ನು ಇವರು ಆರೈಕೆ ಮಾಡುತ್ತಾರೆ. ಪ್ರಸ್ತುತ ಇವರ ಬಳಿ 1,800 ದನಗಳಿವೆ. ದಿನಕ್ಕೆ 15 ದನಗಳು ಆಗಮಿಸುತ್ತವೆ.
ಬ್ರೂನಿಂಗ್ ಅವರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದು, ತಮ್ಮ ಹೆಸರನ್ನು ಸುದೇವಿ ದಾಸಿ ಎಂದು ಬದಲಾಯಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.