ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಭೂತಪೂರ್ವ ವಿಜಯವನ್ನು ದಾಖಲಿಸಿರುವ ಹಿನ್ನಲೆಯಲ್ಲಿ, ಉತ್ತರಪ್ರದೇಶದ ಪರ್ಸಾಪುರ್ ಮಹ್ರಾರುರ್ ಗ್ರಾಮದ ವಝೀರ್ ಗಂಜ್ ಗ್ರಾಮದ ಮುಸ್ಲಿಂ ಕುಟುಂಬವೊಂದು ತಮ್ಮ ಮಗುವಿಗೆ ಮೋದಿಯವರ ಹೆಸರನ್ನಿಟ್ಟಿದೆ.
ಗುರುವಾರ ಫಲಿತಾಂಶ ಪ್ರಕಟವಾದ ದಿನ ಮೈನಾಝ್ ಬೇಗಂ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಪತಿ ಮುಸ್ತಾಖ್ ಅಹ್ಮದ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಮಗುವಿಗೆ ನರೇಂದ್ರ ಮೋದಿ ಎಂದು ಹೆಸರಿಡುವಂತೆ ತಿಳಿಸಿದ್ದಾರೆ. ಅದರಂತೆ ಮಗುವಿಗೆ ನರೇಂದ್ರ ದಾಮೋದರ್ ದಾಸ್ ಮೋದಿ ಎಂದು ಹೆಸರಿಡಲಾಗಿದೆ. ಮುಸ್ತಾಖ್ ಅವರ ತಂದೆ ಹೆಸರಿನ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಅಫಿಡವಿಟ್ ಅನ್ನು ಸಲ್ಲಿಕೆ ಮಾಡಿದ್ದಾರೆ.
ಈ ಹೆಸರಿಟ್ಟಿದ್ದಕ್ಕೆ ಸಮುದಾಯದ ವಿರೋಧ ವ್ಯಕ್ತವಾಗುವುದಿಲ್ಲವೇ ಎಂದು ಕೇಳಿದರೆ, “ಯಾಕೆ ಜನರು ವಿರೋಧಿಸಬೇಕು. ಮೋದಿಜೀ ನಮ್ಮ ಪ್ರಧಾನಿಯಾಗಿದ್ದು, ಅವರ ಹೆಸರಿಡಲು ನಮಗೆ ಹೆಮ್ಮೆ ಎನಿಸುತ್ತದೆ. ಎಲ್ಲದಕ್ಕೂ ಹೆಚ್ಚಾಗಿ, ನಮ್ಮ ಮನೆಯ ಮಗುವಿಗೆ ಹೆಸರಿಡುವ ನಿರ್ಧಾರ ನಮ್ಮ ಕುಟುಂಬಕ್ಕೆ ಮಾತ್ರ ಇದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.