ಅಮೇಥಿ: ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರವನ್ನು ಗೆದ್ದ ಸ್ಮೃತಿ ಇರಾನಿ ಅವರಿಗೆ ಆಪ್ತನ ಸಾವು ಬರಸಿಡಿಲಿನಂತೆ ಬಂದೆರಗಿದೆ. ದುಷ್ಕರ್ಮಿಗಳು ಗುಂಡು ಹಾರಿಸಿ ಸುರೇಂದ್ರ ಸಿಂಗ್ ಎಂಬುವವರನ್ನು ಹತ್ಯೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಪರವಾಗಿ ಸಕ್ರಿಯವಾಗಿ ಪ್ರಚಾರ ನಡೆಸಿದ್ದ ಅವರನ್ನು ರಾಜಕೀಯ ದ್ವೇಷದಿಂದ ಕೊಲ್ಲಲಾಗಿದೆ ಎಂಬ ಅನುಮಾನ ದಟ್ಟವಾಗಿದೆ.
ಆಪ್ತನ ಸಾವಿನ ಸುದ್ದಿ ತಲುಪುತ್ತಿದ್ದಂತೆ ಅಮೇಥಿಗೆ ಧಾವಿಸಿದ ಸ್ಮೃತಿ ಅವರು, ಅಂತಿಮ ವಿಧಿವಿಧಾನದಲ್ಲಿ ಭಾಗಿಯಾದರು. ಮಾತ್ರವಲ್ಲ ಶವಯಾತ್ರೆಯ ವೇಳೆ ಹೆಗಲು ಕೊಟ್ಟರು. ಮಹಿಳೆಯೊಬ್ಬರು ಶವ ಹೊರಲು ಹೆಗಲು ಕೊಡುವುದು ಅತ್ಯಂತ ಅಪರೂಪದ ಸನ್ನಿವೇಶವಾಗಿದೆ. ಸ್ಮೃತಿ ಕಾರ್ಯಕ್ಕೆ ಅಮೇಥಿ ಮತ್ತು ಹೊರಗಿನ ಜನರಿಂದ ಶ್ಲಾಘನೆಗಳು ವ್ಯಕ್ತವಾಗಿದೆ.
ಸುರೇಂದ್ರ ಸಿಂಗ್ ಕುಟುಂಬಕ್ಕೆ ಸ್ವಾಂತನ ಹೇಳಿದ ಅವರು, ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯನ್ನು ನೀಡದೆ ಬಿಡಲಾರೆ, ಇದಕ್ಕಾಗಿ ಸುಪ್ರೀಂಕೋರ್ಟ್ ಬಾಗಿಲನ್ನು ಬೇಕಾದರು ಬಡಿಯಲು ನಾನು ಸಿದ್ಧಳಿದ್ದೇನೆ ಎಂದಿದ್ದಾರೆ.
ಬಳಿಕ ಅಮೇಥಿಯನ್ನು ಪ್ರೀತಿಯಿಂದ ಸಂಭಾಳಿಸಿ ಎಂದು ಸಂದೇಶ ರವಾನಿಸಿದ ರಾಹುಲ್ ಅವರಿಗೆ ಪ್ರತಿಕ್ರಿಯೆ ನೀಡಿದ ಸ್ಮೃತಿ, “ನಿಮ್ಮ ಸಂದೇಶ ನನಗೆ ಅತ್ಯಂತ ಗಟ್ಟಿ ಮತ್ತು ಸ್ಪಷ್ಟವಾಗಿ ತಲುಪಿದೆ ಎಂದು ಸಂದೇಶ ಕಳುಹಿಸಿದ ವ್ಯಕ್ತಿಗೆ ನಾನು ಏನು ಹೇಳಲು ಬಯಸುತ್ತೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.