ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಭಾನುವಾರ ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಅವರು, ಇವುಗಳನ್ನು ನಿರ್ಬಂಧಿಸಲು ಕಠಿಣ ಕಾನೂನಗಳನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜನೆಗೊಳಿಸಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದ ಅವರು, ಬೇಜವಾಬ್ದಾರಿಯುತವಾದ ವರದಿಗಾರಿಕೆಯಿಂದ ಬೇಸತ್ತು ತಾನು ಕಳೆದ ತಿಂಗಳಿನಿಂದ ಮಾಧ್ಯಮಗಳೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದೇನೆ ಎಂದಿದ್ದಾರೆ.
“ರಾಜಕಾರಣಿಗಳನ್ನು ಅತ್ಯಂತ ವ್ಯಂಗ್ಯವಾಗಿ ಟಿವಿ ಮಾಧ್ಯಮಗಳು ತೋರಿಸುತ್ತಿವೆ, ನಾವೇನು ಬಿಟ್ಟಿ ಬಿದ್ದಿದ್ದೇವಾ? ರಾಜಕೀಯದ ಬಗ್ಗೆ ಮಾಧ್ಯಮಗಳಿಗೇನು ಗೊತ್ತು? ಕೇವಲ ಟಿಆರ್ಪಿಯನ್ನು ಹೆಚ್ಚಳಗೊಳಿಸುವುದಕ್ಕಾಗಿ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಕಟಿಸುತ್ತಿದೆ ಎಂದಿದ್ದಾರೆ. ಅಲ್ಲದೇ, ಸಮಾಜದ ಅಭಿವೃದ್ಧಿ ಮತ್ತು ರೈತರ ಮತ್ತು ಕೃಷಿ ಬಿಕ್ಕಟ್ಟಿನ ಬಗ್ಗೆ ಗಮನ ನೀಡುವಲ್ಲಿಯೂ ಮಾಧ್ಯಮಗಳು ಪಾತ್ರ ವಹಿಸಬೇಕು ಎಂದಿದ್ದಾರೆ.
“ಟಿವಿ ಚಾನೆಲ್ ಮುಖ್ಯಸ್ಥರಿಗೆ ಒಳ್ಳೆಯ ಸ್ಟೋರಿ ಸಿಗುವುದಿಲ್ಲ ಎಂದಾದರೆ ಸುಳ್ಳು ಸುದ್ದಿ ಪ್ರಕಟಿಸುವ ಬದಲು ಟಿವಿ ಮುಚ್ಚಿ ಮನೆಗೆ ಹೋಗುವುದೇ ವಾಸಿ. ಇಂತಹ ನಕಲಿ ಸುದ್ದಿಗಳ ಅವಶ್ಯಕತೆ ಜನರಿಗೆ ಇರುವುದಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮ ಹಿಂದೆ ನೈತಿಕತೆಯನ್ನು ಹೊಂದಿತ್ತು ಆದರೆ ಈಗ ಇಲ್ಲ. ನಮ್ಮ ಸರ್ಕಾರ ಇರುವುದು ಮಾಧ್ಯಮಗಳ ವರದಿಯಿಂದಾಗಿ ಅಲ್ಲ, 6.6 ಕೋಟಿ ಕನ್ನಡಿಗರ ನಂಬಿಕೆಯಿಂದಾಗಿ. ಮಾಧ್ಯಮಗಳ ಬಗ್ಗೆ ನನಗೆ ಭಯ ಇಲ್ಲ” ಎಂದಿದ್ದಾರೆ.
ಮೇ 23 ರ ಬಳಿಕ ಸರ್ಕಾರ ಪತನವಾಗುತ್ತದೆ ಮತ್ತು ತಮ್ಮ ಮಗ ಮಂಡ್ಯದಲ್ಲಿ ಸೋಲುತ್ತಾನೆ ಎಂದು ಬಿತ್ತರಗೊಳ್ಳುತ್ತಿರುವ ಸುದ್ದಿಗಳು ಕುಮಾರಸ್ವಾಮಿಯವರ ಆಕ್ರೋಶಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.