ನವದೆಹಲಿ: ರಿಲಾಯನ್ಸ್ ಜಿಯೋ ಸಂಸ್ಥೆಯು ತನ್ನ ಗ್ರಾಹಕರ ಪ್ರೈಮ್ ಮೆಂಬರ್ಶಿಪ್ ಅನ್ನು ಒಂದು ವರ್ಷಗಳ ಅವಧಿಗೆ ಸ್ವಯಂಚಾಲಿತವಾಗಿ ನವೀಕರಣಗೊಳಿಸುತ್ತಿದೆ ಎಂದು ಟೆಲಿಕಾಮ್ ಟಾಕ್ ವರದಿ ಮಾಡಿದೆ. ಪ್ರೈಮ್ ಮೆಂಬರ್ಶಿಪ್ ಮೂಲಕ ಜಿಯೋ ಗ್ರಾಹಕರು ಹೆಚ್ಚುವರಿ ಡಾಟಾ ಮತ್ತು ಜಿಯೋದ ವಿವಿಧ ಆ್ಯಪ್ಗಳಿಗೆ ಉಚಿತ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ.
ಗ್ರಾಹಕರು ತಮ್ಮ ಸದಸ್ಯತ್ವ ನವೀಕರಿಸಲು ಬೆರಳುಗಳನ್ನು ಆಡಿಸಬೇಕಾಗಿಲ್ಲ, ಕಂಪನಿಯೇ ಅವರಿಗೆ ಯೂಸರ್ ಮೆಂಬರ್ಶಿಪ್ ಅನ್ನು ಸ್ವಯಂಚಾಲಿತವಾಗಿ ನೀಡುತ್ತಿದೆ. ತಮ್ಮ ಸದಸ್ಯತ್ವ ನವೀಕರಣಗೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಗ್ರಾಹಕರು ಮೈ ಜಿಯೋ ಆ್ಯಪ್ ಅನ್ನು ತಮ್ಮ ಮೊಬೈಲ್ ಫೋನಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.
ಮೈ ಜಿಯೋ ಆ್ಯಪ್ ಓಪನ್ ಮಾಡಿದರೆ ಅದರಲ್ಲಿ ಮೇಲೆ ಎಡ ಭಾಗದಲ್ಲಿ ಮೆನುವಿನಲ್ಲಿ ‘ಮೈ ಪ್ಲ್ಯಾನ್ಸ್’ ಎಂದು ಕಾಣಿಸಿಕೊಳ್ಳುತ್ತದೆ. ಸದಸ್ವತ್ವ ನವೀಕರಣಗೊಂಡಿದ್ದರೆ, ‘ಒಂದು ವರ್ಷಗಳ ಅವಧಿಗೆ ನಿಮ್ಮ ಉಚಿತ ಜಿಯೋ ಪ್ರೈಮ್ ಮೆಂಬರ್ಶಿಪ್ ಯಶಸ್ವಿಯಾಗಿ ರಿಜಿಸ್ಟರ್’ ಆಗಿದೆ ಎಂದು ಬರೆದಿರಲಾಗುತ್ತದೆ.
ಜಿಯೋ ಪ್ರೈಮ್ ಮೆಂಬರ್ಶಿಪ್ ಪಡೆದುಕೊಂಡಿರುವವರು ಜಿಯೋ ಸಿನಿಮಾ, ಜಿಯೋ ಮ್ಯೂಸಿಕ್, ಜಿಯೋ ಟಿವಿ ಮುಂತಾದ ಆ್ಯಪ್ಗಳನ್ನು ಬಳಸಬಹುದಾಗಿದೆ. ಸಾಮಾನ್ಯ ಬಳಕೆದಾರರಿಗೆ ಸಿಗದಂತಹ ಹೆಚ್ಚುವರಿ ಡಾಟಾ ಮತ್ತು ಉತ್ತಮ ಆಫರ್ಗಳೂ ದೊರೆಯುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.