ನವದೆಹಲಿ: ಆಧುನೀಕರಣ ಪ್ರಕ್ರಿಯೆಗೆ ಒಳಪಡುತ್ತಿರುವ ಭಾರತೀಯ ಸೇನೆಯು ಹೆಚ್ಚುವರಿಯಾಗಿ 464 ರಷ್ಯನ್ ಮೂಲದ ಸುಧಾರಿತ ಟಿ-90 ಭೀಷ್ಮಾ ಬ್ಯಾಟಲ್ ಟ್ಯಾಂಕ್ ಅನ್ನು ಸೇರ್ಪಡೆಗೊಳಿಸುತ್ತಿದೆ. ಇದರಿಂದಾಗಿ ಪಶ್ಚಿಮ ವಲಯದಲ್ಲಿ ಸೇನೆಯ ಸಾಮರ್ಥ್ಯವನ್ನು ಸಾಷಕ್ಟು ಹೆಚ್ಚಾಗಲಿದೆ.
ಕಳೆದ ಸಂಪುಟ ಸಮಿತಿಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ದೊರಕಿದೆ. ಅವಧಿ ಹೆವಿ ವೆಹ್ಹಿಕಲ್ ಫ್ಯಾಕ್ಟರಿಗೆ ಈ ಟ್ಯಾಂಕ್ಗಳನ್ನು ಉತ್ಪಾದನೆ ಮಾಡಲು ಆರ್ಡರ್ ನೀಡಲಾಗಿದೆ. 30-41 ತಿಂಗಳೊಳಗೆ ಈ ಸಂಸ್ಥೆಯು ರೂ.13,448 ಕೋಟಿ ವೆಚ್ಚದಲ್ಲಿ ಮೊದಲ ಬ್ಯಾಚಿನ ಟ್ಯಾಂಕರ್ಗಳನ್ನು ಪೂರೈಕೆ ಮಾಡಲಿದೆ.
ಸೈನ್ಯ ಆಕ್ರಮಣಕಾರಿಯಾಗಿ ತನ್ನ ಸಂಪೂರ್ಣ ಯುದ್ಧ-ಹೋರಾಟದ ಯಂತ್ರಗಳನ್ನು “ಕೋಲ್ಡ್ ಸ್ಟಾರ್ಟ್” ಅಥವಾ “ಪ್ರೊ-ಆಕ್ಟಿವ್ ಸ್ಟ್ರಾಟಜಿ” ಯೊಂದಿಗೆ ಫಾರ್ಮಾಟ್ ಮಾಡುತ್ತಿದೆ, ಇದು ಗಡಿ ಪ್ರದೇಶಗಳಲ್ಲಿ ಕ್ಷಿಪ್ರಗತಿಯಲ್ಲಿ ಸೇನೆಯನ್ನು ನಿಯೋಜಿಸಿ, ಆಕ್ರಮಣಕ್ಕೆ ಕ್ಷಿಪ್ರ ಪ್ರತಿಕ್ರಿಯೆಯನ್ನು ನೀಡುವತ್ತ ಕಾರ್ಯೋನ್ಮುಖವಾಗಿದೆ.
ಭಾರತದ 67 ಶಸ್ತ್ರಾಸ್ತ್ರ ರೆಜಿಮೆಂಟ್ಗಳು ಸುಮಾರು 1,070 ಟಿ-90 ಟ್ಯಾಂಕ್, 124 ಅರ್ಜುನ್ ಟ್ಯಾಂಕ್ ಮತ್ತು 2400 ಟಿ-72 ಟ್ಯಾಂಕ್ ಅನ್ನು ಹೊಂದಿದೆ. ಟಿ-90 ಟ್ಯಾಂಕ್ಗಳು ಲೇಸರ್ ಗೂಡೆಡ್ ಇನ್ವರ್ ಮಿಸೈಲ್ ಮತ್ತು 125 ಎಂಎಂ ಆರ್ಮರ್ಡ್ ಪಿಯರ್ಸಿಂಗ್ ಫಿನ್ ಸ್ಟಬಿಲ್ಐಸ್ಟ್ ದಿಸ್ಕಾರ್ಡಿಂಗ್ ಸಬೋಟ್ (APFSDS) ಅನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.