ಬೆಂಗಳೂರು: ಮುಂಬರುವ ಡಿಸೆಂಬರ್ 2016ರ ಒಳಗೆ ಸಾರ್ವಜನಿಕ ಸೇವೆಗಳನ್ನು ಒದಗಿಸಲು ಭಾರತವು ಎಂಟು ಸಾರ್ಕ್ ದೇಶಗಳಿಗೆ ಮೀಸಲಾದ ಉಪಗ್ರಹ ಆರಂಭಿಸಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ ಎ.ಎಸ್ ಕಿರಣ್ ಕುಮಾರ್ ಹೇಳಿದ್ದಾರೆ.
ಎರಡು ಟನ್ ಭಾರದ೧೨ಕೆ.ಯು ಟ್ರಾನ್ಸ್ ಬ್ಯಾಂಡ್ ಹೊಂದಿರುವ ಈ ಉಪಗ್ರಹವನ್ನು ತಲಾ ಒಂದರಂತೆ ಪ್ರತಿ ದೇಶಗಳಿಗೂ ಒದಗಿಸಲಾಗುವುದು. ಶಿಕ್ಷಣ, ಟೆಲಿ ಮೆಡಿಸಿನ್, ವಿಪತ್ತು ಪ್ರದೇಶಗಳಿಗೆ ಮೇಲ್ವಿಚಾರಣೆ ಆಧಾರಿತ ಸೇವೆಗಳನ್ನು ನೀಡಲು ಅನುಕೂಲಕರವಾಗುವುದು ಎಂದು ಇಸ್ರೋ ಅಧ್ಯಕ್ಷ ತಿಳಿಸಿದರು.
ಉಪಗ್ರಹ ನಿರ್ಮಾಣದ ಸಾಮರ್ಥ್ಯವಿರುವ ದೇಶ ಭಾರತ ಒಂದೇ ಆಗಿದ್ದರಿಂದ ಉಳಿದ ಸಾರ್ಕ್ ದೇಶಗಳಿಗೆ ಉಪಗ್ರಹಗಳನ್ನು ಉಡುಗೋರೆಯಾಗಿ ನೀಡಲು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ಈ ಪ್ರಸ್ತಾಪಕ್ಕೆ ಸಾರ್ಕ್ ದೇಶಗಳು ಸಹಿ ಹಾಕಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.