ಚೆನ್ನೈ : ಹದಿಮೂರು ವರ್ಷದ ಚೆನ್ನೈ ಮೂಲದ ಬಾಲಕನೊಬ್ಬ ಅಮೆರಿಕ ಮೂಲದ ‘The World’s Best’ ಶೋ ಎಂಬ ಕಾರ್ಯಕ್ರಮದಲ್ಲಿ ಒಂದು ಮಿಲಿಯನ್ ಡಾಲರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾನೆ. ಲಿಡಿಯನ್ ನಾದಸ್ವರಮ್ ಈ ಸಾಧನೆ ಮಾಡಿದ ಬಾಲಕ.
ಸಂಗೀತಗಾರನಾಗಿರುವ ಈ ಬಾಲಕ ಈ ಕಾರ್ಯಕ್ರಮದಲ್ಲಿ ಅತ್ಯದ್ಭುತ ರೀತಿಯ ಪ್ರದರ್ಶನವನ್ನು ನೀಡಿದ್ದಾನೆ. ಎರಡು ಪಿಯಾನೋಗಳನ್ನು ಅತಿ ಹೆಚ್ಚಿನ ವೇಗದಲ್ಲಿ ಕಣ್ಣಿಗೆ ಪಟ್ಟಿಯನ್ನು ಕಟ್ಟಿಕೊಂಡು ಏಕ ಕಾಲದಲ್ಲಿ ಪ್ಲೇ ಮಾಡುವ ಮೂಲಕ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ.
ಅಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಸ್ಥಾಪಿರುವ ಚೆನ್ನೈನ ಕೆಎಂ ಸಂಗೀತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಲಿಡಿಯನ್ ಈ ಬಗ್ಗೆ ಸಂತೋಷ ಹಂಚಿಕೊಂಡಿದ್ದು, ನಾನು ಕಳೆದ ನಾಲ್ಕು ವರ್ಷಗಳಿಂದ ಪಿಯಾನೋ ಬಾರಿಸುತ್ತಿದ್ದೇನೆ. ಕೀ ಬೋರ್ಡ್ ಪರಿಣಿತರಾದ ಅಕ್ಕ ಮತ್ತು ಅಪ್ಪನಿಂದ ಪ್ರೇರಣೆಯನ್ನು ಪಡೆದುಕೊಂಡು ಪಿಯಾನೋ ಚಿಕ್ಕ ವಯಸ್ಸಿನಲ್ಲೇ ಕಲಿತುಕೊಂಡಿದ್ದೇನೆ. ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಅತೀವ ಸಂತೋಷವಾಗುತ್ತಿದೆ ಎಂದಿದ್ದಾನೆ.
ಪಿಯಾನೊದಲ್ಲಿ ಹೆಚ್ಚಿನ ಗಮನವನ್ನು ಹರಿಸಬೇಕು ಎಂಬ ಕಾರಣದಿಂದ ನನಗೆ ನನ್ನ ಪೋಷಕರು ಮನೆಯಲ್ಲೇ ವಿದ್ಯಾಭ್ಯಾಸ ಹೇಳಿಕೊಡುತ್ತಿದ್ದಾರೆ. ವಿಶ್ವದ ಅತ್ಯುತ್ತಮ ಸಂಯೋಜಕ ಆಗಬೇಕು ಎಂಬುದು ನನ್ನ ಗುರಿಯಾಗಿದೆ ಎಂದಿದ್ದಾನೆ.
ಲಿಡಿಯನ್ ತಂದೆ ವರ್ಷನ್ ಸತೀಶ್ ಕೂಡ ಸಂಯೋಜಕರಾಗಿದ್ದು, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಂತ್ಯ ಸಂಸ್ಕಾರದ ಹಾಡನ್ನು ಅವರೇ ಸಂಯೋಜಿಸಿದ್ದರು. ಮಗನ ಸಾಧನೆಯ ಬಗ್ಗೆ ಹೆಮ್ಮೆ ಪಟ್ಟುಕೊಂಡಿರುವ ಅವರು, ನನ್ನ ಸಂತೋಷವನ್ನು ಹೇಳಲು ಪದಗಳೇ ಸಿಗುತ್ತಿಲ್ಲ. ಚಿಕ್ಕ ವಯಸ್ಸಿನಲ್ಲೇ ಆತ ಸಂಗೀತವನ್ನು ಕಲಿತುಕೊಂಡ, ಒಂದು ದಿನ ಆತ ಶ್ರೇಷ್ಠ ಸಂಯೋಜಕ ಆಗುತ್ತಾನೆ ಎಂಬುದು ನನಗೆ ತಿಳಿದಿತ್ತು ಎಂದಿದ್ದಾರೆ.
ಲಿಡಿಯನ್ ಪ್ರಶಸ್ತಿ ಗೆದ್ದಿರುವುದನ್ನು ಸಂತೋಷಗೊಂಡಿರುವ ಎ. ಆರ್. ರೆಹಮಾನ್ ಟ್ವೀಟ್ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
Lydian wins #cbs#world’s best ! https://t.co/O27OABQCDS
— A.R.Rahman (@arrahman) March 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.