ಬೆಂಗಳೂರು: ಇಸ್ರೋದ ವಿವಿಧ ಯೋಜನೆಗಳಿಗೆ ಅತ್ಯುನ್ನತ ಕೊಡುಗೆಗಳನ್ನು ನೀಡಿದ 96 ಮಂದಿಗೆ ಇಸ್ರೋ ಅವಾರ್ಡ್ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಅಂತರಿಕ್ಷ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.
ನಾಲ್ಕು ಕೆಟಗರಿಗಳಲ್ಲಿ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ. 50 ಮಂದಿ ಯುವ ವಿಜ್ಞಾನಿ ಕೆಟಗರಿಯಲ್ಲಿ ಅವಾರ್ಡ್ ದೊರೆತಿದೆ, 20 ಮಂದಿ ಮೆರಿಟ್ ಅವಾರ್ಡ್ ದೊರೆತಿದೆ, 10 ಮಂದಿ ಪರ್ಫಾಮೆನ್ಸ್ ಎಕ್ಸಲೆನ್ಸ್ ಅವಾರ್ಡ್, 16 ಮಂದಿಗೆ ಟೀಮ್ ಎಕ್ಸಲೆನ್ಸ್ ಅವಾರ್ಡ್ನ್ನು ನೀಡಲಾಗಿದೆ, 2017ರಲ್ಲಿ ನೀಡಿದ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ, ಇಸ್ರೋದ ವಿವಿಧ ಕೇಂದ್ರಗಳಿಂದ ಬಂದ ಅಧಿಕಾರಿಗಳು ಆಯ್ಕ ತಂಡದಲ್ಲಿದ್ದರು.
ಈ ವರ್ಷ ನಾಲ್ಕು ಕೆಟಗರಿಯಲ್ಲಿ ನೀಡಲಾದ ಪ್ರಶಸ್ತಿಯನ್ನು ಹೊರತುಪಡಿಸಿ, ಅತ್ಯುತ್ತಮ ಮತ್ತು ಜೀವಮಾನ ಸಾಧನೆ ಪ್ರಶಸ್ತಿಯನ್ನು ದ್ವೈವಾರ್ಷಿಕವಾಗಿ ನೀಡಲಾಗುತ್ತದೆ. 2007ರಿಂದ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ.
ಇಸ್ರೋದ ವಿವಿಧ ಪ್ರಾಜೆಕ್ಟ್ಗಳಿಗೆ ವೈಯಕ್ತಿಕವಾಗಿ ಮತ್ತು ತಂಡವಾಗಿ ಅತ್ಯುನ್ನತ ಕೊಡುಗೆಯನ್ನು ನೀಡಿದ್ದನ್ನು ಪರಿಗಣಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇಸ್ರೋದ ಮಾಜಿ ಮುಖ್ಯಸ್ಥ ಡಾ.ಕೆ. ಕಸ್ತೂರಿರಂಗನ್, ಮುಖ್ಯಸ್ಥ ಡಾ.ಕೆ.ಸಿವನ್ ಪ್ರಶಸ್ತಿಗಳನ್ನು ಪ್ರದಾನಿಸಿದರು.
🇮🇳 #ISROMissions 🇮🇳
Proud recipients of #ISROAwards in recognition to outstanding contributions to space progs.This year awards in 4 category: Young Scientist Award (50), Merit Award (20), Performance Excellence Award (10) & Team Excellence Award (16). Total 96. Congratulations pic.twitter.com/mXVk4dEyvj— ISRO (@isro) March 13, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.