ನವದೆಹಲಿ: 2018-19ರ ಹಣಕಾಸು ವರ್ಷದಲ್ಲಿ ದಾಖಲೆ ಎಂಬಂತೆ ಉಜ್ವಲಾ ಯೋಜನೆಯಡಿ 40.7 ಮಿಲಿಯನ್ ಕುಟುಂಬಗಳು ಎಲ್ಪಿಜಿ ಸಂಪರ್ಕವನ್ನು ಪಡೆದುಕೊಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ.45ರಷ್ಟು ಏರಿಕೆಯಾಗಿದೆ.
ಭಾರತದ ಮೂರು ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್ಗಳನ್ನು ನಿಗದಿಪಡಿಸಿರುವ ಟಾರ್ಗೆಟ್ ಅನ್ವಯ, 2019ರ ಮಾರ್ಚ್ವರೆಗೆ ಸುಮಾರು 42.5 ಮಿಲಿಯನ್ ಹೊಸ ಎಲ್ಪಿಜಿ ಸಂಪರ್ಕಗಳನ್ನು ಗ್ರಾಹಕರು ಪಡೆಯಲಿದ್ದಾರೆ.
ಎಲ್ಪಿಜಿ ಕನೆಕ್ಷನ್ ನೀಡುವ ವಿಚಾರದಲ್ಲಿ ಸರ್ಕಾರ ಈಗಾಗಲೇ ಟಾರ್ಗೆಟ್ನ್ನು ಮೀರಿ ಮುಂದುವರೆಯುತ್ತಿದೆ. 2019ರ ಜನವರಿಯಲ್ಲಿ 2 ಕೋಟಿ ಹೊಸ ಎಲ್ಪಿಜಿ ಸಂಪರ್ಕಕ್ಕೆ ಟಾರ್ಗೆಟ್ ಇಡಲಾಗಿತ್ತು, ಆದರೆ 2.67ಕೋಟಿ ಕನೆಕ್ಷನಗಳನ್ನು ನೀಡಲಾಗಿದೆ.
ದೇಶದ ಪ್ರತಿ ಮನೆ ಮನೆಗಳಲ್ಲೂ ಅಡುಗೆ ಅನಿಲ ಇರಬೇಕು ಎಂಬ ಉದ್ದೇಶವನ್ನು ಈಡೇರಿಸಲು ನರೇಂದ್ರ ಮೋದಿ ಸರ್ಕಾರ ಅತ್ಯಂತ ಶ್ರಮವಹಿಸಿ ಕಾರ್ಯನಿರ್ವಹಣೆ ಮಾಡುತ್ತಿದೆ.
2016ರ ಮೇ 1ರಂದು ಸರ್ಕಾರ ಉಜ್ವಲಾ ಯೋಜನೆಯನ್ನು ಆರಂಭಿಸಿತು. ಜನವರಿ 28 ರವರೆಗೆ ತೈಲ ಕಂಪನಿಗಳು 6.23 ಕೋಟಿಗೂ ಹೆಚ್ಚು ಎಲ್ಪಿಜಿ ಸಂಪರ್ಕವನ್ನು ಈ ಯೋಜನೆಯಡಿ ದೇಶದಾದ್ಯಂತ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.