ನವದೆಹಲಿ: ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ‘ಧ್ರುವ’ ಹೆಸರಿನ ಮೂರು ಸುಧಾರಿತ ಲಘು ಹೆಲಿಕಾಫ್ಟರ್ಗಳನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡಿದೆ. 22 ಎಎಲ್ಎಚ್ ಎಂಕೆ-III ಕಾಂಟ್ರ್ಯಾಕ್ಟ್ ಅನ್ವಯ ಈ ಹೆಲಿಕಾಫ್ಟರ್ನ್ನು ನಿರ್ಮಾಣ ಮಾಡಲಾಗಿದೆ.
2017ರ ಆಗಸ್ಟ್ ತಿಂಗಳಿನಲ್ಲಿ ಎಚ್ಎಎಲ್ ಸೇನೆಯೊಂದಿಗೆ 40 ಎಎಲ್ಎಚ್ (22 ಎಲ್ಎಚ್ ಎಂಕೆ III ಮತ್ತು 18 ಎಂಕೆ IV ರುದ್ರ)ವನ್ನು ಪೂರೈಸುವ ಬಗೆಗಿನ ಒಪ್ಪಂದಕ್ಕೆ ಪ್ರವೇಶಿಸಿತು.
22 ಎಲ್ಎಎಚ್ ಎಂಕೆ III ಹೆಲಿಕಾಫ್ಟರ್ಗಳ ಪೈಕಿ ಈಗಾಗಲೇ 19 ಹೆಲಿಕಾಫ್ಟರ್ಗಳನ್ನು ನಿರ್ಮಾಣ ಮಾಡಲಾಗಿದೆ, ಇವುಗಳನ್ನು ತ್ವರಿತವಾಗಿ ಸೇನೆಗೆ ಹಸ್ತಾಂತರ ಮಾಡಲಿದೆ ಎಂದು ಎಚ್ಎಎಲ್ ಹೇಳಿದೆ.
ಈ ಸುಧಾರಿತ ಲಘು ಹೆಲಿಕಾಫ್ಟರ್ ಬಹು ಕಾರ್ಯಾಚರಣಾ ಸಾಮರ್ಥ್ಯವನ್ನು ಹೊಂದಿದ್ದು, 5.5 ಟನ್ ತೂಕ ವರ್ಗದ ಹೊಸ ತಲೆಮಾರಿನ ಹೆಲಿಕಾಫ್ಟರ್ ಆಗಿದೆ. ಇದನ್ನು ಎಚ್ಎಎಲ್ ದೇಶೀಯವಾಗಿ ವಿನ್ಯಾಸಪಡಿಸಿದೆ ಮತ್ತು ಅಭಿವೃದ್ಧಿಪಡಿಸಿದೆ.
ಈ ಹೆಲಿಕಾಫ್ಟರ್ ತನ್ನ ಹಾರಾಟದುದ್ದಕ್ಕೂ ಅತ್ಯುತ್ಕೃಷ್ಟ ಪ್ರದರ್ಶನವನ್ನು ನೀಡಲಿದೆ ಎಂದು ಎಚ್ಎಎಲ್ ಹೇಳಿಕೊಂಡಿದೆ.
ಕ್ಷಿಪ್ರ ನಿಯೋಜನೆ ಮತ್ತು ಕಾರ್ಯಾಚರಣಾ ಪ್ರದೇಶವನ್ನು ವಿಸ್ತರಿಸಲು ಈ ಅತೀ ವೇಗದ ಹೆಲಿಕಾಫ್ಟರ್ ಹೆಚ್ಚು ಹೆಚ್ಚಿನ ಸೂಕ್ತವಾಗಿರುತ್ತದೆ, ಈ ಹೆಲಿಕಾಪ್ಟರ್ ಅನ್ನು ಸಾಮಾನ್ಯವಾಗಿ ಸ್ಕಿಡ್ ವರ್ಶನ್ ಮತ್ತು ವ್ಹೀಲ್ಡ್ ವರ್ಶನ್ನಲ್ಲಿ ತಯಾರಿಸಲಾಗುತ್ತದೆ ಎಂದು ಎಚ್ಎಎಲ್ ಹೇಳಿದೆ.
ವ್ಹೀಲ್ಡ್ ವರ್ಶನ್ನಲ್ಲಿ, ಸ್ಥಿರ ಮತ್ತು ಹಿಂತೆಗೆದುಕೊಳ್ಳುವ ಅಂಡರ್ ಕ್ಯಾರಿಯೇಜ್ಗಳ ಆಯ್ಕೆಗಳು ಲಭ್ಯವಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.