ರಾಂಚಿ: ಝಾರ್ಖಂಡ್ ಸರ್ಕಾರ ಮಂಗಳವಾರ ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ (ಪಿಎಫ್ಐ) ಮೇಲೆ ಮರು ನಿಷೇಧವನ್ನು ಹೇರಿದೆ. ಹೈಕೋರ್ಟ್ ಪಿಎಫ್ಐ ಮೇಲಿನ ನಿಷೇಧವನ್ನು ತೆರವುಗೊಳಿಸಿದ ಒಂದು ತಿಂಗಳ ಬಳಿಕ ಸರ್ಕಾರ ಮತ್ತೆ ನಿಷೇಧ ಹೇರಿದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ಈ ಸಂಘಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ನಿಷೇಧವನ್ನು ಹೇರಲಾಗಿದೆ ಎಂದು ಸರ್ಕಾರ ಹೇಳಿದೆ.
ತನ್ನ ರಾಜ್ಯದಲ್ಲಿ ಪಿಎಫ್ಐ ಸಂಘಟನೆ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದೆ. ಈ ಬಾರಿ ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿಯೇ ಸಂಘಟನೆಯನ್ನು ನಿಷೇಧ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಝಾರ್ಖಂಡ್ ಸರ್ಕಾರದ ಪ್ರಕಾರ, ಪಿಎಫ್ಐ ಸಂಘಟನೆ ಇತರ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕವನ್ನು ಹೊಂದಿದೆ, ಜನರ ಮೇಲೆ ಇದು ಭಯೋತ್ಪಾದಕ ಸಿದ್ಧಾಂತವನ್ನು ಬಿತ್ತುತ್ತಿದೆ, ಈ ಸಂಘಟನೆಯ ಸಿದ್ಧಾಂತಗಳು ಇಸಿಸ್ ಸಿದ್ಧಾಂತಗಳಿಂದ ಪ್ರೇರಿತಗೊಂಡಿದೆ ಎಂದು ಸರ್ಕಾರ ಆರೋಪಿಸಿದೆ.
2018ರ ಫೆಬ್ರವರಿಯಲ್ಲಿ, ರಘುಬರ್ ದಾಸ್ ಸರ್ಕಾರ ಪಿಎಫ್ಐ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಿ ಸಂಘಟನೆಯನ್ನು ನಿಷೇಧಕ್ಕೊಳಪಡಿಸಿತ್ತು. ಈ ನಿಷೇಧವನ್ನು ಪಿಎಫ್ಐ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ನಿಷೇಧದ ವೇಳೆ ಸರ್ಕಾರ ಅಗತ್ಯ ಪ್ರಕ್ರಿಯೆ ನಡೆಸಿಲ್ಲ ಎಂದು ಹೇಳಿ ನಿಷೇಧವನ್ನು ಹೈಕೋರ್ಟ್ ತೆರವುಗೊಳಿಸಿತ್ತು. ಇದೀಗ ಮತ್ತೆ ಸರ್ಕಾರ ಈ ಸಂಘಟನೆಯನ್ನು ನಿಷೇಧಕ್ಕೊಳಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.