ನೈದುಯಿ ; ಕೈಲಾಸ-ಮಾನಸ ಸರೋವರ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ೫೩ ವರ್ಷಗಳ ಬಳಿಕ ಚೀನಾ ನಾಥು ಲಾ ಮಾರ್ಗವನ್ನು ತೆರೆದಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೊದಿಯ ಭೇಟಿಯ ವೇಳೆ ನೀಡಿದ್ದ ಭರವಸೆಯನ್ನು ಚೀನಾ ಈಡೇರಿಸಿದೆ.
ಕೈಲಾಸ ಯಾತ್ರೆ ಕೈಗೊಂಡಿರುವ ಮೊದಲ ತಂಡವನ್ನು ಚೀನಾದ ಭಾರತೀಯ ರಾಯಭಾರಿ ಲಿ ಯುಚೆಂಗ್ ಅವರು ಟೆಬೆಟ್ನಲ್ಲಿ ಬರಮಾಡಿಕೊಳ್ಳಲಿದ್ದಾರೆ. ಸಿಕ್ಕಿಂನ ಮುಖ್ಯಮಂತ್ರಿ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿ ಸಿದ್ಧತೆಗಳ ಬಗ್ಗೆ ಮಾಹಿತಿಯನ್ನು ಕೈಗೊಂಡಿದ್ದಾರೆ.
ನಾಥು ಲಾ ಮಾರ್ಗ ಸಮುದ್ರದಿಂದ ಸುಮಾರು 4,000ಮೀಟರ್ ಎತ್ತರದಲ್ಲಿದೆ. ಇದು ಸಿಕ್ಕಿಂ ಮೂಲಕ ಹಿಮಾಲಯವನ್ನು ದಾಟಿಕೊಂಡು ಕೈಲಾಸಕ್ಕೆ ಪ್ರಯಾಣಿಸುವ ಸರಳ ಮಾರ್ಗವಾಗಿದೆ. ಈ ಹಿಂದೆ ಲಿಪುಲೇಖ ಮಾರ್ಗವನ್ನು ಬಳಸಲಾಗುತ್ತಿದ್ದು, ಆದರೆ ಉತ್ತರಾಖಂಡದಲ್ಲಿ ನಡೆದ ಮಹಾ ಪ್ರವಾಹದ ಬಳಿಕ ಈ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.
ಮೊದಲ ತಂಡದ ಸುಮಾರು 44 ಕೈಲಾಸ ಯಾತ್ರಾರ್ಥಿಗಳು ಇಂದು ಸಿಕ್ಕಿಂ ಗಡಿಯನ್ನು ದಾಟಿದ್ದಾರೆ, ನಾಳೆ ನಾಥು ಲಾ ಮೂಲಕ ಅವರು ಕೈಲಾಸ-ಮಾನಸ ಸರೋವರಕ್ಕೆ ಪ್ರಯಾಣಿಸಲಿದ್ದಾರೆ.
ಈ ಬೆಳವಣಿಗೆ ಭಾರತ ಮತ್ತು ಚೀನಾ ಸಂಬಂಧವನ್ನು ಗಟ್ಟಿಗೊಳಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.