ವಾಷಿಂಗ್ಟನ್: ಬಿಹಾರದಲ್ಲಿ ಹುಟ್ಟಿದ ಮೋನಾ ದಾಸ್ ಅವರು ಯುಎಸ್ನ ವಾಷ್ಟಿಂಗ್ಟನ್ ಸ್ಟೇಟ್ನ 47ನೇ ಜಿಲ್ಲೆಯ ಸೆನೆಟರ್ ಆಗಿ ನೇಮಕವಾಗಿದ್ದಾರೆ. ಕೈಯಲ್ಲಿ ಭಗವದ್ಗೀತೆ ಹಿಡಿದು ಇವರು ಜ.14ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
47 ವರ್ಷದ ಮೋನಾ ದಾಸ್, 8 ತಿಂಗಳ ಮಗುವಿದ್ದಾಗಲೇ ಅಮೆರಿಕಾಗೆ ಪೋಷಕರೊಂದಿಗೆ ವಲಸೆ ಹೋಗಿದ್ದರು. ಇವರ ಹೆತ್ತವರು ಬಿಹಾರದ ಮುಂಗೆರ್ ಜಿಲ್ಲೆಯ ಖರಗ್ಪುರ್ ಡಿವಿಶನ್ನ ದರಿಯಪುರ್ ಗ್ರಾಮದವರು.
ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದುಕೊಂಡು ಪ್ರಮಾಣವಚನ ಸ್ವೀಕರಿಸಿದ್ದು ಮಾತ್ರವಲ್ಲ, ತಮ್ಮ ಭಾಷಣದಲ್ಲೂ ಭಾರತ ಮತ್ತು ಭಾರತೀಯ ಪರಂಪರೆಯ ಬಗ್ಗೆ ತಮ್ಮ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ.
‘ನಮಸ್ಕಾರ್ ಮತ್ತು ಎಲ್ಲರಿಗೂ ಪ್ರಣಾಮಗಳು. ಮಕರ ಸಂಕ್ರಾಂತಿಯ ಶುಭಕಾಮನೆಗಳು, ಮಹಾತ್ಮ ಗಾಂಧಿಯಂತೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರೂ ಹೆಣ್ಣುಮಕ್ಕಳ ಯಶಸ್ಸಿಗೆ ಶಿಕ್ಷಣವೇ ಕೀಲಿಕೈ ಅಂದಿದ್ದಾರೆ. ಒಂದು ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಆಕೆಯ ಪರಿವಾರವೇ ಶಿಕ್ಷಿತಗೊಳ್ಳುತ್ತದೆ’ ಎಂದು ಮೋನಾ ದಾಸ್ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.