ಅರ್ಬನ್ ನಕ್ಸಲಿಸಂ ವಿಷಯವಾಗಿ ಮಂಥನ ವತಿಯಿಂದ ಸಂವಾದ ಕಾರ್ಯಕ್ರಮ ಕುಮಟಾದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಕ್ತಾರರಾಗಿ ಆಗಮಿಸಿದ ಪ್ರಜ್ಞಾ ಪ್ರವಾಹದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಯೋಜಕರಾದ ಶ್ರೀ ರಘುನಂದನ್ ಮಾತನಾಡಿದರು. ಮಂಥನದ ಸಂಯೋಜಕರಾದ ಶ್ರೀ ಡಿ.ವಿ ಹೆಗಡೆ ಉಪಸ್ಥಿತರಿದ್ದರು.
ನಕ್ಸಲರ ಬಗ್ಗೆ ಮಾತನಾಡಿ, ನಕ್ಸಲ್ಬಾರಿಯಲ್ಲಿ ಶುರುವಾದ ನಕ್ಸಲಿಸಂ ಸುಮಾರು 125 ಜಿಲ್ಲೆಗಳವರೆಗೆ ಹರಡಿತ್ತು. ಪೋಲಿಸರ ಮೇಲೆ, CRPF ತುಕಡಿಗಳ ಮೇಲೆ ದಾಳಿ ಮಾಡುವಷ್ಟು ಶಸ್ತ್ರಾಸ್ತ್ರಗಳನ್ನು ನಕ್ಸಲರು ಹೊಂದಿದ್ದರು. ಜಿಹಾದ್ನಿಂದ ಹತ್ಯೆಯಾದವರ ಸಂಖ್ಯೆಗಿಂತ ನಕ್ಸಲ್ರಿಂದ ಹತ್ಯೆಯಾದವರ ಸಂಖ್ಯೆಯೆ ಹೆಚ್ಚು. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದೆ ಕ್ರಾಂತಿ ಮಾಡಬೇಕೆಂದು ಕೊಲ್ಲುವ ನಕ್ಸಲರಿಗೆ ಈ ಅರ್ಬನ್ ನಕ್ಸಲರು ಬೆಂಬಲ ಕೊಡುತ್ತಾರೆ. ಅರ್ಬನ್ ನಕ್ಸಲರು ನಗರ ಪ್ರದೇಶಗಳಲ್ಲಿ ಗೌರವಾನ್ವಿತ ಸ್ಥಾನಗಳಲ್ಲಿದ್ದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಆಗಿರುತ್ತಾರೆ. ನಕ್ಸಲರಾಗಲು ಪ್ರಚೋದಿಸುವ ಇವರು ನಕ್ಸಲರಿಗೆ ಕಾನೂನು ಬೆಂಬಲ ನೀಡುತ್ತಾರೆ. ತಮ್ಮ ಬೇರೆ ಬೇರೆ ಹೆಸರಿನಲ್ಲಿರುವ ಹೋರಾಟದ ವೇದಿಕೆಗಳಿಂದ ನಕ್ಸಲರ ನೇಮಕಾತಿಯನ್ನೂ ಮಾಡುತ್ತಾರೆ. ಇಂತಹ ಚಟುವಟಿಕೆಗಳಿಗೆ NGO ಗಳ ಮೂಲಕ ಹಣ ಪಡೆಯುತ್ತಾರೆ. ಪ್ರಜಾಪ್ರಭುತ್ವದ ಸೋಗಿನಲ್ಲಿ ಹೋರಾಟ ಮಾಡುವ ಕಮ್ಯೂನಿಸ್ಟ್ರು ಅಸಲಿಗೆ ಪ್ರಜಾಪ್ರಭುತ್ವವನ್ನು ಒಪ್ಪುವುದಿಲ್ಲ. ಈ ರೀತಿ ಕಾಣದೆ ಕೆಲಸ ಮಾಡಿ ಬಂದೂಕು ನೀಡಿ ಹೋರಾಟಕ್ಕೆ ಇಳಿಸುವ ಜನರೆ ಅರ್ಬನ್ ನಕ್ಸಲ್ಸ್. ಎಂದರು.
ನಂತರ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿ ಸಮಾಜದಲ್ಲಿ ಸಮಸ್ಯೆಗಳಿದ್ದಾಗ ನಾವು ಸ್ಪಂದಿಸಬೇಕು ಮತ್ತು ಜನರನ್ನು ಹತ್ಯೆಗೈಯುವ ನಕ್ಸಲರ ಮತ್ತು ಅವರ ಸಮರ್ಥಕರಾದ ಅರ್ಬನ್ ನಕ್ಸಲರ ಸಮಾಜಕ್ಕೆ ತಿಳಿಸಬೇಕು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.