ಮೈಸೂರು: ಪತ್ರಕರ್ತ ಹಾಗೂ ಮೈಸೂರು ಸಂಸದರಾಗಿರುವ ಪ್ರತಾಪ್ ಸಿಂಹ ಅವರು ಭಾರತೀಯ ಪತ್ರಿಕಾ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಅವರ ನೇಮಕದ ಆದೇಶವನ್ನು ಹೊರಡಿಸಿದೆ. ಮೂರು ವರ್ಷಗಳ ಅವಧಿಗೆ ಅವರು ನೇಮಕಗೊಂಡಿದ್ದಾರೆ.
1966ರಲ್ಲಿ ಭಾರತದ ಮುದ್ರಣ ಮಾಧ್ಯಮದ ಮೇಲೆ ನಿಗಾ ವಹಿಸಲು ಮತ್ತು ನಿಯಂತ್ರಿಸಲು ಕಾಯ್ದೆಯನ್ನು ರೂಪಿಸಿ ಮಂಡಳಿಯನ್ನು ರಚಿಸಲಾಯಿತು. 2015ರಿಂದ ನ್ಯಾಯಮೂರ್ತಿ ಚಂದ್ರಮೌಳಿ ಕುಮಾರ್ ಪ್ರಸಾದ್ ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾನೂನುಬದ್ಧ ಸಂಸ್ಥೆಯಾಗಿ ಇದು ಕಾರ್ಯನಿರ್ವಹಿಸುತ್ತಿದ್ದು, ಪತ್ರಿಕೆ ಅಥವಾ ಪತ್ರಕರ್ತನ ವಿರುದ್ಧ ದೂರು ಬಂದರೆ ಅವರನ್ನು ಕರೆಯಿಸಿ ವಿಚಾರಣೆಯನ್ನು ನಡೆಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.