ನವದೆಹಲಿ: ತಮ್ಮನ್ನು ಪಕ್ಷದ ಉನ್ನತ ಸ್ಥಾನದಿಂದ ಕಿತ್ತು ಹಾಕಿರುವ ಅರವಿಂದ್ ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿರುವ ಎಎಪಿಯ ಭಿನ್ನಮತೀಯ ನಾಯಕ ಯೋಗೇಂದ್ರ ಯಾದವ್ ಅವರು ‘ಎಲ್ಲಾ ಶ್ರೇಷ್ಠ ನಾಯಕರುಗಳು ಟೀಕೆಗಳನ್ನು ಕೇಳುವ ಸಾಮರ್ಥ್ಯವನ್ನು ಹೊಂದಿರಬೇಕು’ ಎಂದು ಕಿವಿಮಾತು ಹೇಳಿದ್ದಾರೆ.
ಕೇಜ್ರಿವಾಲ್ ಅವರ ಸರ್ವಾಧಿಕಾರಿ ಧೋರಣೆಯ ಹೊರತಾಗಿಯೂ ನನಗೆ ಎಎಪಿಯ ಮೇಲೆ ಅಪಾರ ಹೆಮ್ಮೆಯಿದೆ. ಹೀಗಾಗಿ ನನಗೆ ಆ ಪಕ್ಷ ತೊರೆಯುವ ಯಾವುದೇ ಯೋಜನೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಒಂದು ಸಾರಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಮೇಲೆ ವೈಯಕ್ತಿಕ ಅಹಂ, ಅವಮಾನಕ್ಕೆ ಯಾವುದೇ ಪ್ರಾಮುಖ್ಯತೆ ಇರುವುದಿಲ್ಲ. ನೀವು ನಿಮ್ಮನ್ನು ಅವಮಾನಕ್ಕೆ ತೆರೆದುಕೊಳ್ಳುತ್ತೀರಿ. ಸಾವಿರಾರು ಎಎಪಿ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿ ದುಡಿದಿದ್ದಾರೆ. ನನಗಿಂತಲೂ ಹೆಚ್ಚು ಕಾರ್ಯ ಮಾಡಿದ್ದಾರೆ. ನಾನೂ ಎಎಪಿಯ ಹೆಮ್ಮೆಯ ಕಾರ್ಯಕರ್ತ’ ಎಂದಿದ್ದಾರೆ.
ನಾನು ಮತ್ತು ಪ್ರಶಾಂತ್ ಭೂಷಣ್ ಅವರು ಅರವಿಂದ್ ಕೇಜ್ರಿವಾಲ್ ಅವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದನ್ನು ಅವರು ಸಹಿಸಿಕೊಳ್ಳಲಿಲ್ಲ. ಶ್ರೇಷ್ಠ ನಾಯಕನಾದವನು ಎಲ್ಲಾ ತರಹದ ಟೀಕೆಗಳನ್ನು ಕೇಳುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.
ಅಲ್ಲದೇ ‘ನೀವೊಬ್ಬ ಉತ್ತಮ ನಾಯಕ, ದೆಹಲಿಯಲ್ಲಿ ಉತ್ತಮ ಆಡಳಿತ ನೀಡುತ್ತೀರಿ ಎಂಬ ನಂಬಿಕೆ ನನಗಿದೆ. ಆದರೆ ನೆನಪಿಟ್ಟುಕೊಳ್ಳಿ, ಟೀಕೆಗಳನ್ನು ಸ್ವೀಕರಿಸದ ವಿನಃ ನೀವು ಉತ್ತಮರಾಗಲು ಸಾಧ್ಯವಿಲ್ಲ. ನಾನು ಎಂದಿಗೂ ನಿಮ್ಮ ಶುಭಚಿಂತಕನಾಗಿರುತ್ತೇನೆ’ ಎಂದು ಯಾದವ್ ಕೇಜ್ರಿವಾಲ್ಗೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.