ಬೆಂಗಳೂರು : ಭಾರತ ಸರ್ಕಾರದ science and technology ಇಲಾಖೆಯ ವತಿಯಿಂದ ನಡೆದ ರಾಷ್ಟ್ರಮಟ್ಟದ ಸೃಜನಾತ್ಮಕ ಸಂಶೋಧನಾ ಲೇಖನ ಸ್ಪರ್ಧೆಯಲ್ಲಿ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ 5 ಮಂದಿ ವಿದ್ಯಾರ್ಥಿಗಳು ತಲಾ 10,000 ರೂ. ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಪಡೆದಿದ್ದಾರೆ.
ಭಾರತ ಸರ್ಕಾರದ science & technology ಇಲಾಖೆಯು INSPIRE Awards (MANAK) ಯೋಜನೆಯಡಿ ಆನ್ಲೈನ್ನಲ್ಲಿ ಸೃಜನಾತ್ಮಕ ಸಂಶೋಧನಾ ಲೇಖನಗಳನ್ನು ಆಹ್ವಾನಿಸಲಾಗಿತ್ತು.
ಬನಶಂಕರಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಾದ ಪ್ರಜ್ಞಾ ಅದ್ನವ್ (6ನೇ ತರಗತಿ), ಚೈತನ್ಯ (6ನೇ ತರಗತಿ), ಗೋಕುಲ್ ಆದಿತ್ಯ (8ನೇ ತರಗತಿ), ಸೃಷ್ಟಿ (9ನೇ ತರಗತಿ), ಸಹನಾ ಬಾನಿ (9ನೇ ತರಗತಿ) ಅವರ ಸೃಜನಾತ್ಮಕ ವಿಜ್ಙಾನ ಲೇಖನಗಳು ಆಯ್ಕೆಯಾಗಿದ್ದು ತಲಾ 10,000 ರೂಪಾಯಿಗಳನ್ನು ಪಡೆದಿದ್ದಾರೆ. ಪ್ರಶಸ್ತಿಗೆ ಪಾತ್ರರಾದ ಈ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಅಭಿನಂದಿಸಿದ್ದಾರೆ.
ಬನಶಂಕರಿ ವಿದ್ಯಾಕೇಂದ್ರದ 6ನೇ ತರಗತಿಯ ವಿದ್ಯಾರ್ಥಿನಿಗಳಾದ ಪ್ರಜ್ಞಾ ಅದ್ನವ್ Separation and fibre extraction ಎಂಬ ವಿಷಯದ ಕುರಿತು, ಚೈತನ್ಯ ಎ. Metro seat assessment ಎಂಬ ವಿಷಯದ ಕುರಿತು, ೮ನೇ ತರಗತಿಯ ಗೋಕುಲ್ ಆದಿತ್ಯ Blind pal ಎಂಬ ವಿಷಯದ ಕುರಿತು, ೯ನೇ ತರಗತಿಯ ವಿದ್ಯಾರ್ಥಿಗಳಾದ ಸೃಷ್ಟಿ ಅವರು ಂAlternative to solar pane ಎಂಬ ವಿಷಯದ ಕುರಿತು ಹಾಗೂ ಸಹನಾ ಬಾನಿ l Petrol measurement ಎಂಬ ವಿಷಯದ ಕುರಿತು ಲೇಖನಗಳನ್ನು ಬರೆದು www.inspireawards-dst.gov.in ಗೆ ಆನ್ಲೈನ್ ಮೂಲಕ ಕಳುಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.