ವಿಶ್ವದ ವಿಮಾನಯಾನ 2037ರ ವೇಳೆಗೆ ದ್ವಿಗುಣಗೊಳ್ಳಲಿದ್ದು, ಭಾರತ ವಿಶ್ವದ ಮೂರನೇ ಅತೀದೊಡ್ಡ ವಾಯುಯಾನ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ ಎಂದು ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಶನ್ ಹೇಳಿದೆ.
ಜಿನೆವಾ: ವಿಶ್ವದ ವಾಯು ಸಂಚಾರ 2037ರ ವೇಳೆಗೆ ದ್ವಿಗುಣಗೊಳ್ಳುವ ನಿರೀಕ್ಷೆ ಇದ್ದು, ಭಾರತ ವಿಶ್ವದ ಮೂರನೇ ಅತೀದೊಡ್ಡ ವಾಯುಯಾನ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ ಎಂದು ವರದಿಯೊಂದು ತಿಳಿಸಿದೆ.
ಭಾರತದ ವಾಯು ವಲಯ ಕ್ಷಿಪ್ರಗತಿಯಲ್ಲಿ ಪ್ರಗತಿ ಕಾಣುತ್ತಿದೆ ಎಂದು ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಶನ್ ಬಿಡುಗಡೆಗೊಳಿಸಿರುವ 20 ವರ್ಷಗಳ ವಾಯು ಪ್ರಯಾಣಿಕರ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.
ಪ್ರಸ್ತುತ ವಿಶ್ವದಲ್ಲೇ 4.1 ಬಿಲಿಯನ್ ವಾಯು ಪ್ರಯಾಣಿಕರಿದ್ದು, ವಾರ್ಷಿಕವಾಗಿ ಶೇ.3.5ರಷ್ಟು ಇದು ಬೆಳವಣಿಗೆ ಕಾಣುತ್ತಿದೆ ಎಂದು 290 ಏರ್ಲೈನ್ಸ್ಗಳನ್ನು ಪ್ರತಿನಿಧಿಸುತ್ತಿರುವ ಈ ಅಸೋಸಿಯೇಶನ್ ಹೇಳಿದೆ.
‘ವಾಯುಯಾನ ಪ್ರಗತಿ ಕಾಣುತ್ತಿದೆ, ಇದರಿಂದ ಜಗತ್ತಿಗೆ ಸಾಕಷ್ಟು ಪ್ರಯೋಜನವಾಗುತ್ತಿದೆ. ಮುಂದಿನ 20 ವರ್ಷದಲ್ಲಿ ವಾಯು ಪ್ರಯಾಣಿಕರ ಸಂಖ್ಯೆ ದ್ವಿಗುಣವಾಗಲಿದ್ದು, ಇದರಿಂದ 100 ಮಿಲಿಯನ್ ಉದ್ಯೋಗ ಸೃಷ್ಟಿಯಾಗಲಿದೆ’ ಎಂದಿದೆ.
ಅಲ್ಲದೇ ಇದರೊಂದಿಗೆ ಹಲವಾರು ನಕಾರಾತ್ಮಕ ಪರಿಣಾಮಗಳೂ ಉಂಟಾಗಲಿದ್ದು, ಇದಕ್ಕೆ ಈಗಿನಿಂದಲೇ ಕಡಿವಾಣ ಹಾಕುವ ಕಾರ್ಯ ನಡೆಯಬೇಕು ಎಂದಿದೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.