ಕೋಲ್ಕತ್ತಾ: ದೇಶದಲ್ಲಿ ನವರಾತ್ರಿ ಸಂಭ್ರಮ ಮುಗಿಲು ಮುಟ್ಟಿದೆ. ದೇವಿಯ ವಿವಿಧ ಅವತಾರಗಳನ್ನು ಆರಾಧಿಸಿ ಭಕ್ತರು ಪುನೀತರಾಗುತ್ತಿದ್ದಾರೆ.
ದುರ್ಗಾಪೂಜೆಗೆ ಹೆಸರಾಗಿರುವ ಕೋಲ್ಕತ್ತಾದಲ್ಲೂ ದಸರಾ ವಿಜ್ರಂಭಣೆಯಿಂದ ಜರುಗುತ್ತಿದ್ದು, ಇಲ್ಲಿನ ದುರ್ಗಾ ಪೆಂಡಾಲ್ಗಳು ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ.
ಕೋಲ್ಕತ್ತಾದ ಪೈವ್ ಸ್ಟಾರ್ ಹೋಟೆಲೊಂದರಲ್ಲಿ ಸಾವಿರ ಕೆಜಿ ಚಾಕೋಲೇಟ್ ಬಳಸಿ ತಯಾರಾದ ದೇವಿಯನ್ನು ಇಡಲಾಗಿದೆ. ದೇವಿ ಬ್ರಹ್ಮಚಾರಿಣಿಯಂತೆ ಬಿಳಿ ವಸ್ತ್ರದಲ್ಲಿದ್ದಾಳೆ ಮತ್ತು ಸ್ಕಂದಮಾತೆಯಂತೆ 4 ಕರಗಳನ್ನು ಹೊಂದಿದ್ದಾಳೆ. ಹುಲಿ ಮೇಲೆ ಕೂತಿದ್ದಾಳೆ. ಪಾದತಳದಲ್ಲಿ ತಾವರೆಯನ್ನೂ ರಚಿಸಲಾಗಿದೆ.
ಹಾಲಿಡೇ ಇನ್ ಕೋಲ್ಕತ್ತಾ ಸಂಸ್ಥೆ ಇದನ್ನು ರಚಿಸಿದ್ದು, ಇದಕ್ಕಾಗಿ ಸುಮಾರು 12 ದಿನಗಳ ಕಾಲ ಶ್ರಮಿಸಿದೆ. ನವರಾತ್ರಿ ಬಳಿಕ ಈ ಮೂರ್ತಿಯನ್ನು ಹಾಲಿನಲ್ಲಿ ವಿಸರ್ಜಿಸಿ ಮಕ್ಕಳಿಗೆ ಹಂಚಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.