ನವದೆಹಲಿ: ಮನುಷ್ಯನ ಜೀವನ, ಘನತೆ ಮತ್ತು ಹಕ್ಕುಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಹುಮುಖ್ಯ ಭಾಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ 25ನೇ ವಾರ್ಷಿಕೋತ್ಸವದ ಅಂಗವಾಗಿ ದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಲಾದ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
’ಕಳೆದ 25 ವರ್ಷಗಳಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದೇಶದ ಸಾಮಾನ್ಯ ಮನುಷ್ಯನ ಧ್ವನಿಯಾಗುತ್ತಾ ಬಂದಿದೆ.
ತುಳಿತಕ್ಕೊಳಗಾದವರ, ಬಡವರ ಧ್ವನಿಯಾಗಿ ಅದು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದೆ. ಅದರ ನ್ಯಾಯಸಮ್ಮತ ಕಾರ್ಯಕ್ಕೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಯೂ ಮನ್ನಣೆ ನೀಡಿದೆ. ಭಾರತಕ್ಕೆ ಮಾನವ ಹಕ್ಕುಗಳ ರಕ್ಷಣೆ ಎಂಬುದು ಸಂಸ್ಕೃತಿ ಮತ್ತು ಪರಂಪರೆಯ ಭಾಗವಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ’ ಎಂದರು.
ಮಾನವ ಹಕ್ಕುಗಳ ಬಗೆಗಿನ ಬದ್ಧತೆ ದೇಶವನ್ನು 1970ರ ಸಂದರ್ಭದಲ್ಲಿ ದುರಂತದಿಂದ ತಪ್ಪಿಸುವಂತೆ ಮಾಡಿದೆ ಎಂದರು.
‘ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೀವನದ ಹಕ್ಕೇ ಇರಲಿಲ್ಲ, ಇನ್ನು ಮಾನವ ಹಕ್ಕಿನ ಬಗ್ಗೆ ಏನು ಹೇಳಲು ಸಾಧ್ಯ? ಆದರೆ ಜನರು ಮಾನವ ಹಕ್ಕನ್ನು ತಮ್ಮ ಪ್ರಯತ್ನದಿಂದಲೇ ಮರಳಿ ಪಡೆದುಕೊಂಡರು’ ಎಂದಿದ್ದಾರೆ.
source; ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.