ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ಗಳು ಇನ್ನು ಕೆಲವೇ ದಿನಗಳಲ್ಲಿ ವಾಹನ ಮತ್ತು ಗೃಹ ಸಾಲದ ಇಎಂಐ ತಗ್ಗಿಸಲಿವೆ.
ಆರ್ಬಿಐ ಈ ವರ್ಷ ಬಡ್ಡಿ ದರ ಕಡಿತಗೊಳಿಸಿದ ಕುರಿತು ಸಾರ್ವಜನಿಕ ವಲಯ ಬ್ಯಾಂಕ್ ಮುಖ್ಯಸ್ಥರೊಂದಿಗೆ ಚರ್ಚಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ಗಳು ಬಡ್ಡಿ ದರ ಇಳಿಸಲಿವೆ ಎಂದಿದ್ದಾರೆ.
ಈ ಆರ್ಬಿಐ ಮೂರು ಬಾರಿ ಒಟ್ಟು 0.75ರಷ್ಟು ಬಡ್ಡಿ ದರ ಇಳಿಸಿದೆ. ಕಳೆದ 2014ರಲ್ಲಿ ಆರ್ಬಿಐ ಶೇ.8ರಷ್ಟು ಅಲ್ಪಾವಧಿ ಸಾಲವನ್ನು ಇತರ ಬ್ಯಾಂಕ್ಗಳಿಗೆ ನೀಡಿತ್ತು. ಆದರೆ ಬ್ಯಾಂಕ್ಗಳು ಗ್ರಾಹಕರಿಗೆ ಇದರ ಲಾಭವನ್ನು ನೀಡಲು ಹಿಂದೇಟು ಹಾಕಿವೆ. ಇದರ ಬಗ್ಗೆ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಬಡ್ಡಿ ದರ ಇಳಿಸದ ಬ್ಯಾಂಕ್ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ವಾಹನಗಳ ಸಾಲದ ಬಡ್ಡಿ ದರ ಇಳಿಸಿದಲ್ಲಿ ಇವುಗಳನ್ನು ಉತ್ಪಾದಿಸುವ ಅಟೋಮೊಬೈಲ್ ಕಂಪೆನಿಗಳಿಗೆ ಹೆಚ್ಚಿನ ವಹಿವಾಟು ಹಾಗೂ ಲಾಭ ದೊರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.