ನವದೆಹಲಿ: ಭಾರತದ ತುರ್ತು ಸ್ಪಂದನಾ ಮೂಲಸೌಕರ್ಯವನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಡಲಾಗಿದ್ದು, ಕೇಂದ್ರ ಗೃಹ ಸಚಿವಾಲಯ ಹಾಗೂ ಇಸ್ರೋ ನಡುವೆ ಈ ಸಂಬಂಧ ಒಪ್ಪಂದ ಏರ್ಪಟ್ಟಿದೆ.
ತುರ್ತು ಸ್ಪಂದನೆಗಾಗಿ ಸುಧಾರಿತ ಏಕೀಕೃತ ನಿಯಂತ್ರಣಾ ಕೊಠಡಿ( advance Integrated Control Room for Emergency Response )ಯನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಇಸ್ರೋ ಮತ್ತು ಗೃಹ ಸಚಿವಾಲಯದ ನಡುವೆ ಒಪ್ಪಂದಕ್ಕೆ ಸಹಿ ಬಿದ್ದಿದೆ.
ಪ್ರಸ್ತಾಪಿತ ಸ್ಥಾಪನೆಗೆ ಇಸ್ರೋ ತನ್ನ ತಂತ್ರಜ್ಞಾನವನ್ನು ನೀಡಲಿದೆ, ಗೃಹ ಸಚಿವಾಲಯದ ಸಂಪೂರ್ಣ ಉಸ್ತುವಾರಿಯೊಂದಿಗೆ ಇದರ ನಿರ್ಮಾಣವಾಗಲಿದೆ, ಒಂದೂವರೆ ವರ್ಷದ ಅವಧಿಯೊಳಗೆ ಈ ಕಂಟ್ರೋಲ್ ರೂಮ್ ಸ್ಥಾಪನೆಗೊಳ್ಳುವ ನಿರೀಕ್ಷೆ ಇದೆ.
ಪ್ರಕೃತಿ ವಿಕೋಪದಂತಹ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ದಳಗಳ ಅವಶ್ಯಕತೆಗಳನ್ನು ಈ ಕಂಟ್ರೋಲ್ ರೂಮ್ ಪೂರೈಸಲಿದೆ. ವಿಪತ್ತುಗಳ ಸಂದರ್ಭದಲ್ಲಿ ನೈಜ ಸಮಯಾಧಾರಿತ ಮಾಹಿತಿ, ಕಾರ್ಯತಂತ್ರ ಮಟ್ಟದ ಪರಿಶೀಲನೆ, ಪರಿಸ್ಥಿತಿ ಅವಲೋಕನ, ಕಮಾಂಡ್, ನಿಯಂತ್ರಣ, ಸಿದ್ಧತೆ, ಸ್ಪಂದನೆಗಳನ್ನು ಈ ಕಂಟ್ರೋಲ್ ರೂಮ್ ನೀಡಲಿದೆ.
Source:ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.