ಜೈಪುರ: ರಾಜಸ್ಥಾನ ಶೀಘ್ರದಲ್ಲೇ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ತಂಡ ಅಲ್ಲಿಗೆ ಎರಡು ದಿನಗಳ ಭೇಟಿ ನೀಡಿದ್ದು, ಚುನಾವಣೆ ನಡೆಸಲು ಬೇಕಾದ ಪೂರ್ವ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದೆ.
ಈ ಬಾರಿಯ ಚುನಾವಣೆಯಲ್ಲಿ ಅಲ್ಲಿನ ಒಟ್ಟು 51,796 ಮತಗಟ್ಟೆಗಳಲ್ಲಿ ಸುಧಾರಿತ ಮತ್ತು ವಿವಿಪ್ಯಾಟ್ಗಳನ್ನೊಳಗೊಂಡ ಹೊಸ ಮತಯಂತ್ರವನ್ನು ಬಳಕೆ ಮಾಡುವುದಾಗಿ ಮುಖ್ಯ ಚುನಾವಣಾಧಿಕಾರಿ ಓಪಿ ರಾವತ್ ಹೇಳಿದ್ದಾರೆ.
ಜೈಪುರದಲ್ಲಿ ಮಾತನಾಡಿದ ಅವರು, ‘ಇವಿಎಂ ಮತ್ತು ವಿವಿಪ್ಯಾಟ್ಗಳು ಸಂಪೂರ್ಣ ಸುರಕ್ಷಿತ, ಟ್ಯಾಂಪರ್ಪ್ರೂಫ್ ಆಗಿದೆ. ಇವಿಎಂ-ಎಂ3 ಮೆಶಿನ್ಗಳಲ್ಲಿ ಟ್ಯಾಂಪರ್ ಡಿಟೆಕ್ಟ್ ಮೆಕಾನಿಸಂ ಅಳವಡಿಸಿದ್ದು, ಅದನ್ನು ಟಚ್ ಮಾಡಿದರೆ ಮೆಶಿನ್ ಫ್ಯಾಕ್ಟರಿ ಮೋಡ್ಗೆ ಹೋಗುತ್ತದೆ ಅಥವಾ ಕಾರ್ಯ ಸ್ಥಗಿತಗೊಳಿಸುತ್ತದೆ’ ಎಂದಿದ್ದಾರೆ.
ಮೆಶಿನ್ಗಳ ಬಗೆಗಿನ ಗೊಂದಲವನ್ನು ನಿವಾರಣೆ ಮಾಡುವ ಸಲುವಾಗಿ ರಾಜಸ್ಥಾನದಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋನಜನೆಗೊಳಿಸುತ್ತೇವೆ ಎಂದಿದ್ದಾರೆ.
Source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.