ಬೆಂಗಳೂರು: ಬಡ ಕುಟುಂಬಗಳ ಮಕ್ಕಳಿಗೆ ಅನ್ನಭಾಗ್ಯ, ಕ್ಷೀರ ಭಾಗ್ಯ ಕಲ್ಪಿಸುವುದರ ಜೊತೆಗೆ ಇದೀಗ ವಸ್ತ್ರಭಾಗ್ಯದ ಯೋಜನೆಯನ್ನು ಸರಕಾರ ಆರಂಭಿಸಲಿದೆ.
ಇನ್ನು ಮುಂದೆ ಬಿಪಿಎಲ್ ಕುಟುಂಬಗಳಿಗೆ ಪ್ರಮುಖ ಹಬ್ಬಗಳಂದು ಮಹಿಳೆಯರಿಗೆ ಸೀರೆ, ಕುಪ್ಪಸ ಹಾಗೂ ಪುರುಷರಿಗೆ ಪಂಚೆ, ಅಂಗಿ ವಿತರಿಸುವ ವಸ್ತ್ರಭಾಗ್ಯ ಯೋಜನೆ 2016-17ನೇ ಸಾಲಿನಿಂದ ಜಾರಿಗೆ ಬರಲಿದೆ ಎಂದು ಜವಳಿ ಖಾತೆ ಸಚಿವ ಬಾಬುರಾವ್ ಚಿಂಚನಸೂರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ಹಬ್ಬಗಳಂದು ವರ್ಷದಲ್ಲಿ 3-4 ಬಾರಿ ವಸ್ತ್ರಗಳನ್ನು ವಿತರಿಸುವ ಬಗ್ಗೆ ಪ್ರಸ್ತಾಪ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಅಲ್ಲದೇ ಈ ಬಟ್ಟೆಗಳನ್ನು ವಿದ್ಯುತ್ ಹಾಗೂ ಕೈಮಗ್ಗದಿಂದ ಬಟ್ಟೆ ತಯಾರಿಸುವ ನೇಕಾರರಿಂದಲೇ ಸಿದ್ಧಪಡಿಸಿ ಖರೀದಿಸಲಾಗುವುದು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.