ಬೆಂಗಳೂರು: ಅತ್ಯಂತ ಪಾರದರ್ಶಕತೆ ಮತ್ತು ರಜೆ ಹಂಚಿಕೆಯನ್ನು ಬಹಳ ವಸ್ತುನಿಷ್ಠೆಯಿಂದ ನಿಭಾಯಿಸುತ್ತಿದ್ದಕೆಎಸ್ಆರ್ಟಿಸಿ ನಿಗಮ ಅನುಷ್ಠಾನಗೊಳಿಸಿರುವ ಸ್ಟಾಪ್ಡ್ಯೂಟಿ ನೋಟಾ ವ್ಯವಸ್ಥೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಇಟಲಿಯ ಮಿಲಾನ್ ನಗರದಲ್ಲಿ ನಡೆದ ಕಾಂಗ್ರೆಸ್ನ 61ನೇ ಸಮ್ಮೇಳನದಲ್ಲಿ ಅಧ್ಯಕ್ಷ ಪೀಟರ್ಹೆಂಡಿ ಹಾಗೂ ಲಂಡನ್ ಸಾರಿಗೆ ಆಯುಕ್ತ ಮಾರೆನ್ಚುಯಾಂಗ್ ಪ್ರಶಸ್ತಿಯನ್ನು ಪ್ರದರ್ಶಿಸಿದರು.
ಸಾರಿಗೆ ನಿಗಮದಲ್ಲಿ ಸುಮಾರು 37,381 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತವನ್ನು ಕಡಿವಾಣ ಹಾಕಲು ಪಾರದರ್ಶಕ ವ್ಯವಸ್ಥೆ ತರಲಾಗಿದ್ದು, ಶೇ.64ರಷ್ಟು ಸಿಬ್ಬಂದಿಗಳು ನಿತ್ಯ ಕಾರ್ಯ ನಿರ್ವಹಿಸುತ್ತಿದ್ದು, ಶೇ.9ರಷ್ಟು ನಿತ್ಯ ರಜೆ, ಶೇ.10ರಷ್ಟು ತುರ್ತು ರಜೆ, ಶೇ.17ರಷ್ಟು ವಾರದ ರಜೆ ಲಭಿಸುತ್ತದೆ.
ನೌಕರರಿಗೆ ರಜೆ ನೀಡುವಲ್ಲಿ ಪಕ್ಷಪಾತ ಮಾಡುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿದ್ದು, ಅದರ ತಡೆಗೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.