ಬೆಂಗಳೂರು: ಕೆಲ ವರ್ಷಗಳ ಹಿಂದೆ ನಿಗದಿಯಾದಂತೆಯೇ ಮಾನವ ಸಹಿತ ಗಗನಯಾನ ಯೋಜನೆಯನ್ನು ಇಸ್ರೋ ಪೂರ್ಣಗೊಳಿಸಲಿದೆ ಎಂದು ಭಾರತದ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ್ ರಾಘವನ್ ಹೇಳಿದ್ದಾರೆ.
‘ಯೋಜನೆಯನ್ನು ಮೀರಿ ಈ ಗಗನಯಾನ ಮಿಶನ್ ನಡೆಯುತ್ತಿಲ್ಲ, ಇದು ಕಾಕತಾಳಿಯವೂ ಅಲ್ಲ. ಹಲವು ಸಮಯದಿಂದ ಯೋಜನೆಗೊಂದು ಆಕಾರವನ್ನು ನೀಡುತ್ತಿದ್ದೇವೆ’ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು 2022ರ ವೇಳೆಗೆ ಭಾರತ ಗಗನಕ್ಕೆ ಮಾನವನನ್ನು ಕಳುಹಿಸಿಕೊಡಲಿದೆ ಎಂದು ಘೋಷಣೆ ಮಾಡಿದ್ದರು. ಈ ಬಗ್ಗೆ ಹೇಳಿಕೆ ನೀಡಿರುವ ರಾಘವನ್, ‘ನಿಗದಿಯಂತೆಯೇ ಇಸ್ರೋ ಯೋಜನೆಯನ್ನು ಪೂರ್ಣಗೊಳಿಸಲಿದೆ’ ಎಂದಿದ್ದಾರೆ.
ಈ ಪ್ರಾಜೆಕ್ಟ್ಗೆ ಹಲವಾರು ಸವಾಲುಗಳಿವೆ ಆದರೆ ಭಾರತಕ್ಕೆ ಈ ಯೋಜನೆಯನ್ನು ಪೂರ್ಣಗೊಳಿಸಲು ಬೇಕಾದ ವೈಜ್ಞಾನಿಕ ತಜ್ಞತೆ, ಜ್ಞಾನ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.