ಹೊಸದಿಲ್ಲಿ: ತುರ್ತು ಸಂದರ್ಭಗಳಲ್ಲಿ ರೈಲನ್ನು ನಿಲ್ಲಿಸಲು ಚೈನ್ನ್ನು ಎಳೆದು ನಿಲ್ಲಿಸುವ ಪದ್ಧತಿ ಇನ್ನು ಮುಂದೆ ಅಂತ್ಯ ಕಾಣಲಿದೆ. ಅದರ ಬದಲು ಮೊಬೈಲ್ ಬಳಕೆ ವ್ಯವಸ್ಥೆ ಜಾರಿಗೆ ಬರಲಿದೆ.
ರೈಲು ಬೋಗಿಗಳಲ್ಲಿರುವ ಚೈನ್ಗಳನ್ನು ಎಳೆಯುವ ಬದಲು ಅಲ್ಲಿ ಅಂಟಿಸಲಾಗುವ ರೈಲು ಚಾಲಕ, ಸಹಚಾಲಕರ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ರೈಲಿನ ಪ್ರತೀ ಮೂರು ಬೋಗಿಗಳಿಗೆ ಓರ್ವ ಸಿಬ್ಬಂದಿ ವಾಕಿ ಟಾಕಿ ಜೊತೆ ಕಾಣಲು ಸಿಗಲಿದ್ದಾರೆ.
ಪ್ರಯಾಣಿಕರು ಅನಗತ್ಯವಾಗಿ ಚೈನ್ ಎಳೆದು ನಿಲ್ಲಿಸುವುದರಿಂದ ರೈಲ್ವೆ ಇಲಾಖೆಗೆ ವಾರ್ಷಿಕ ಆಗುತ್ತಿರುವ 3,000 ಕೋ. ರೂ. ಅಂದಾಜು ನಷ್ಟವನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಂದ್ರ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ರೈಲು ಬೋಗಿಗಳಲ್ಲಿಯ ಚೈನ್ಗಳನ್ನು ತೆಗೆಸುವ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಅನಗತ್ಯವಾಗಿ ಅಥವಾ ವೈಯಕ್ತಿಕ ಕಾರಣಕ್ಕೆ ರೈಲು ನಿಲ್ಲಿಸಿದರೆ ಒಂದು ವರ್ಷ ಜೈಲು ಶಿಕ್ಷೆ ಅಥವಾ 1,000 ರೂ. ದಂಡ ಇಲ್ಲಿ ವಿಧಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.