ಭಾರತದಲ್ಲಿ ವಿದ್ಯುತ್ ಸಂಪರ್ಕವಿರದ 18452 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಕೊಡಿಸುವುದರ ಜೊತೆಗೆ 100% ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಕೊಡಿಸುವ ಭರವಸೆಯನ್ನು ಮಾರ್ಚ್ 2018 ರಲ್ಲಿ ಪೂರೈಸಿದ ಮೋದಿ ಸರಕಾರವು ಈಗ 31 ಡಿಸೆಂಬರ್ 2018 ರ ಒಳಗೆ ದೇಶದ 100% ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಪೂರೈಸುವ ಮಹತ್ತರ ಸಾಧನೆಯೆಡೆಗೆ ದಾಪುಗಾಲಿಡುತ್ತಿದೆ.
ಮನೆಮನೆಗೆ ವಿದ್ಯುತ್ ಪೂರೈಸುವ ಸೌಭಾಗ್ಯ ಯೋಜನೆಗೆ ಅಕ್ಟೋಬರ್ 2017 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು ಈಗಾಗಲೇ ಈ ಯೋಜನೆಯಡಿಯಲ್ಲಿ ಒಂದು ಕೋಟಿಗೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕೊಡಲಾಗಿದೆ. ಭಾರತದಲ್ಲಿ ಒಟ್ಟು 21, 90, 65, 829 (ಇಪ್ಪತ್ತೊಂದು ಕೋಟಿಯ ತೊಂಭತ್ತು ಲಕ್ಷ ದ ಅರುವತ್ತೈದು ಸಾವಿರದ ಎಂಟುನೂರ ಇಪ್ಪತ್ತೊಂಭತ್ತು) ಮನೆಗಳಿವೆ. ಅಕ್ಟೋಬರ್ 2017 ರ ವರೆಗೆ 18,40,68,710 ಮನೆಗಳಿಗೆ ವಿದ್ಯುತ್ ಸಂಪರ್ಕ ಅಗಿತ್ತು. ಆದರೆ 3,49,97,119 ಮನೆಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಸರ್ವರಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆಯು ಅಕ್ಟೋಬರ್ 2017 ರಂದು ಆರಂಭವಾಯಿತು. ಇದರ ಪೂರ್ವಭಾವಿಯಾಗಿ ಪ್ರಧಾನ ಮಂತ್ರಿ ಗ್ರಾಮೀಣ ವಿದ್ಯುತೀಕರಣ ಯೋಜನೆಯಡಿಯಲ್ಲಿ ವಿದ್ಯುತೀಕರಣಗೊಳ್ಳದ 18452 ಗ್ರಾಮಗಳಿಗೆ ಪೂರ್ವ ನಿರ್ಧಾರಿತ 1000 ದಿನಗಳ ಮೊದಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಬೆಟ್ಟ, ಕಣಿವೆ, ಪರ್ವತ, ಕಾಡು ಮುಂತಾದ ಅತೀ ಕಠಿಣ ಪ್ರದೇಶಗಳಲ್ಲಿ ಇರುವ ಕುಗ್ರಾಮಗಳಿಗೆ ವಿದ್ಯುತ್ ತಂತಿಗಳನ್ನು ಎಳೆದು ಟ್ರಾನ್ಸ್ ಫಾರ್ಮರ್ ಗಳನ್ನು ಸ್ಥಾಪಿಸಿ ವಿದ್ಯುತ್ ಸಂಪರ್ಕವನ್ನು ಕೊಡಲಾಯಿತು.
ನಂತರ ಅಕ್ಟೋಬರ್ 2017 ರಿಂದ ಇದುವರೆಗೆ 1,10,60,024 (ದಿನಾಂಕ 12/08/2018 ರಕ್ಕೆ ಅನ್ವಯವಾಗುವಂತೆ ಒಂದು ಕೋಟಿ ಹತ್ತು ಲಕ್ಷ ದ ಅರವತ್ತು ಸಾವಿರದ ಇಪ್ಪತ್ತ ನಾಲ್ಕು ಮನೆಗಳಿಗೆ ) ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ 2,39,37,024 ಮನೆಗಳಿಗೆ ವಿದ್ಯುತ್ ಸಂಪರ್ಕ ಆಗಬೇಕಿದೆ. ಕೇಂದ್ರ ಸರಕಾರವು ವಿದ್ಯುತ್ ಮಂತ್ರಾಲಯಕ್ಕೆ ಭಾರತದ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 2018 ರ ಡಿಸೆಂಬರ್ 31 ನ್ನು ಡೆಡ್ ಲೈನ್ ಆಗಿ ನೀಡಿದೆ. ಆ ದಿಸೆಯಲ್ಲಿ ಮನೆ ಮನೆ ವಿದ್ಯುತೀಕರಣವೂ ವೇಗವನ್ನು ಪಡೆದುಕೊಳ್ಳುತ್ತಿದೆ.
ದೇಶಾದ್ಯಂತ ದಿನವೊಂದಕ್ಕೆ 50000 ದಿಂದ ಒಂದು ಲಕ್ಷಗಳಷ್ಟು ಮನೆಗಳಿಗೆ ಕರೆಂಟ್ ಕನೆಕ್ಷನ್ ಮಾಡಲಾಗುತ್ತಿದೆ. ದಿನಾಂಕ 11/08/2018 ರಂದು ಒಂದೇ ದಿನದಲ್ಲಿ 1,03,997 ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆತಿದೆ. ಮುಂದಿನ ದಿನಗಳಲ್ಲಿ ಈ ವೇಗವು ದ್ವಿಗುಣವಾಗಲಿದೆ ಹಾಗೂ 2018 ರ ಡಿಸೆಂಬರ್ 31 ರಂದು ದೇಶದ ಎಲ್ಲಾ ಮನೆಗಳಲ್ಲಿ ವಿದ್ಯುತ್ ದೀಪಗಳು ಬೆಳಗಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.