ಟೋಕಿಯೋ: ಜಪಾನಿನ ಹಿರೋಶಿಮಾದ ಮೇಲೆ ಅಮೆರಿಕಾ ಅಣುಬಾಂಬ್ ದಾಳಿ ನಡೆಸಿ ಇಂದಿಗೆ 73 ವರ್ಷಗಳು ಸಂದಿದೆ. ಇದರ ಸ್ಮರಣಾರ್ಥ ಜಪಾನಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗಿದೆ.
ಎರಡನೇ ಮಹಾಯುದ್ಧದ ಸಂದರ್ಭ 1945ರ ಆಗಸ್ಟ್ 6ರ ದಿನ ಬೆಳಿಗ್ಗೆ 8.15ರ ಸುಮಾರಿಗೆ ಹಿರೋಶಿಮಾದ ಮೇಲೆ ಅಮೆರಿಕಾ ತನ್ನ ‘ಬಿ29’ ಯುದ್ಧ ವಿಮಾನದ ಮೂಲಕ ಅಣುಬಾಂಬ್ನ್ನು ಹಾಕಿತ್ತು. ಇದರಲ್ಲಿ 1.40 ಲಕ್ಷ ಜನರು ಹತರಾದರು.
ಇಂದು ಬೆಳಿಗ್ಗೆ 8.48ರ ಸುಮಾರಿಗೆ ಜಪಾನಿನಾದ್ಯಂತ ಮೌನವನ್ನು ಆಚರಿಸಲಾಗುತ್ತದೆ, ಹಿರೋಶಿಮಾದ ಶಾಂತಿ ಸ್ಮಾರಕ ಉದ್ಯಾನದಲ್ಲಿ ಸಮಾರಂಭವನ್ನು ಆಯೋಜಿಸಲಾಗುತ್ತದೆ.
ಹಿರೋಶಿಮಾದಲ್ಲಿ ದಾಳಿ ನಡೆಸಿದ ಮೂರು ದಿನಗಳ ನಂತರ ನಾಗಸಾಕಿಯ ಮೇಲೂ ಅಮೆರಿಕ ಅಣುಬಾಂಬ್ ದಾಳಿಯನ್ನು ನಡೆಸಿತ್ತು, ಇದರಲ್ಲಿ 74 ಸಾವಿರ ಜನರು ಹತರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.