ನವದೆಹಲಿ: ನಕಲಿ ಸರ್ಟಿಫಿಕೇಟ್ ಆರೋಪಕ್ಕೆ ಸಿಲುಕಿ ಬಂಧಿತರಾಗಿರುವ ದೆಹಲಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಅವರ ವಿರುದ್ಧದ ತನಿಖೆಯನ್ನು ಮುಂದುವರೆಸಿರುವ ಪೊಲೀಸರು ಬುಧವಾರ ಅವರನ್ನು ಉತ್ತರಪ್ರದೇಶದ ಫೈಝಾಬಾದ್ಗೆ ಕರೆದುಕೊಂಡು ಹೋಗಿದ್ದಾರೆ. ಇಲ್ಲಿ ಅವರು ತಮಗೆ ಬೇಕಾದ ಪದವಿಯ ನಕಲಿ ಸರ್ಟಿಫಿಕೇಟನ್ನು ಪಡೆದುಕೊಂಡರು ಎನ್ನಲಾಗಿದೆ.
ವಿಜ್ಞಾನ ಪದವಿ, ಕಾನೂನು ಮಾರ್ಕ್ ಶೀಟ್ ಮತ್ತು ವಲಸೆ ಸರ್ಟಿಫಿಕೇಟನ್ನು ಅವರು ಫೋರ್ಜರಿ ಮಾಡಿಕೊಂಡರು ಎಂಬ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ.
ಆದರೆ ತೋಮರ್ ಈ ಆರೋಪವನ್ನು ತಳ್ಳಿ ಹಾಕಿದ್ದು, ನೈತಿಕತೆ ಆಧಾರದಲ್ಲಿ ನಾನು ನನ್ನ ಮೇಲಿನ ಆರೋಪದ ವಿರುದ್ಧ ಹೋರಾಡುತ್ತೇನೆ ಎಂದಿದ್ದಾರೆ.
ಎಎಪಿ ಇದು ನರೇಂದ್ರ ಮೋದಿ ಸರ್ಕಾರ ಎಎಪಿ ವಿರುದ್ಧ ನಡೆಸುತ್ತಿರುವ ಪಿತೂರಿ ಎಂದು ಆರೋಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.