ಬೆಂಗಳೂರು: ಮಾರಕ ರೋಗಕ್ಕೆ ತುತ್ತಾಗಿರುವ 12 ವರ್ಷದ ಬಾಲಕನೊಬ್ಬನ ಆಸೆಯನ್ನು ಪೂರೈಸುವ ಮೂಲಕ ಬೆಂಗಳೂರು ಪೊಲೀಸರು ಮಾನವೀಯತೆಯನ್ನು ಮೆರೆದಿದ್ದಾರೆ.
ಕೋಲಾರದ ಚಿಂತಾಮಣಿ ಮೂಲದ ಶಶಾಂಕ್, ತಲೆಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದಾನೆ. ಪ್ರಸ್ತುತ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದೊಡ್ಡವನಾದ ಬಳಿಕ ಪೊಲೀಸ್ ಅಧಿಕಾರಿಯಾಗಬೇಕು ಎಂಬುದು ಇವನ ಹೆಬ್ಬಯಕೆಯಾಗಿದ್ದು, ಇದು ಈಡೇರುತ್ತೋ ಇಲ್ಲವೋ ಎಂಬ ಆತಂಕ ಇದೀಗ ಆತನ ಹೆತ್ತವರನ್ನು ಕಾಡುತ್ತಿದೆ. ಹೀಗಾಗಿ ಅವರು ಒಂದು ದಿನದ ಮಟ್ಟಿಗಾದರೂ ತಮ್ಮ ಮಗನ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ವಿವಿಪುರಂ ಪೊಲೀಸರು ಸಾಥ್ ನೀಡಿದ್ದಾರೆ.
ಹೆತ್ತವರೊಂದಿಗೆ ಠಾಣೆಗೆ ಬಂದ ಶಶಾಂಕ್ಗೆ ಸಮವಸ್ತ್ರ ನೀಡಿ, ಒಂದು ದಿನದ ಮಟ್ಟಿಗೆ ಇನ್ಸ್ಪೆಕ್ಟರ್ ಮಾಡಲಾಗಿದೆ. ಇನ್ಸ್ಪೆಕ್ಟರ್ ರಾಜು ಆತನಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ. ಕೇಕ್ ಕಟ್ ಮಾಡಿದ ಆತ ಎಲ್ಲರಿಗೂ ಅದನ್ನು ಹಂಚಿದ. ಒಂದು ದಿನದ ಮಟ್ಟಿಗಾದರೂ ಮಗನ ಕನಸು ನನಸು ಮಾಡಿರುವ ಸಂತೃಪ್ತ ಭಾವ ಪೋಷಕರಿಗೆ ಸಿಕ್ಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.