ನವದೆಹಲಿ : ಇನ್ನು ಮುಂದೆ ಮೆಡಿಕಲ್ ಸ್ಟೋರ್ಸ್ಗಳಲ್ಲಿ ಬೇಬಿ ಕೇರ್ ಉತ್ಪನ್ನ ಕೆಲವೇ ದಿನ! ಹೌದು, ಕೇಂದ್ರ ಸರಕಾರ ಔಷಧಿಗಳನ್ನು ಹೊರತುಪಡಿಸಿ ಇನ್ನಾವುದೇ ಉತ್ಪನ್ನಗಳನ್ನು ಮಾರುವಂತಿಲ್ಲ ಎಂದು ಸಂಸತ್ನಲ್ಲಿ ಪ್ರಸ್ತಾವನೆ ತರಲು ಚಿಂತಿಸುತ್ತಿದೆ ಎಂದು ಕೇಂದ್ರ ಸಚಿವ ಗಂಗಾರಾಮ್ ಅಹಿರ್ ತಿಳಿಸಿದ್ದಾರೆ.
ಮೆಡಿಕಲ್ನಲ್ಲಿ ಮಾರಾಟ ಮಾಡುವ ಉತ್ಪನ್ನಗಳು ಆರೋಗ್ಯದಾಯಕ ಮತ್ತು ಸುರಕ್ಷಿತ ಎಂಬ ಭಾವನೆ ಜನರಲ್ಲಿದೆ. ಆದರೆ ನೆಸ್ಲೆ ಕಂಪನಿಯ ಮ್ಯಾಗಿಯಲ್ಲಿ ಅಧಿಕ ಸೀಸದ ಅಂಶ ದೊರೆತಂತೆ ಮುಂದೊಂದು ದಿನ ಅಂತಹುದೇ ಅಂಶಗಳು ಈ ಉತ್ಪನ್ನಗಳು ದೊರೆತರೆ ಜನರು ಮೆಡಿಕಲ್ ಶಾಪ್ಗಳ ಮೇಲಿನ ವಿಶ್ವಾಸ ಕಳೆದುಕೊಳ್ಳವ ಸಂದರ್ಭ ಎದುರಾಗಲಿದೆ. ಆದುದರಿಂದ ಸರಕಾರ ಮುನ್ನೆಚರಿಕೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಅದೇ ರೀತಿಯಲ್ಲಿ ಮೆಡಿಕಲ್ ನಲ್ಲಿ ಶಿಶುಗಳ ಪೌಷ್ಟಿಕ ಹಾಲಿನ ಹುಡಿ, ಶಿಶು ಆಹಾರ, ಶಿಶುಗಳ ಎಣ್ಣೆ, ಸಾಬೂನು, ಇತ್ಯಾದಿ ಪದಾರ್ಥಗಳು ಬಿಕರಿಯಾಗುತ್ತಿದೆ.
ಅಲ್ಲದೇ ದೇಹದಾಢ್ಯ ಉತ್ಪನ್ನಗಳನ್ನು ಮಾರಲಾಗುತ್ತಿದೆ. ಇವುಗಳನ್ನು ಸರಕಾರ ಮೆಡಿಕಲ್ ಶಾಪ್ಗಳಿಂದ ದೂರವಿಡಲು ಚಿಂತಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.