ಮುಂಬಯಿ: ಅಮೇರಿಕದ ಕೇಂದ್ರ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಸಿಸ್ಟಮ್ಸ್ನ ಬಡ್ಡಿದರ ನಿರ್ಧಾರದ ಮೇಲೆ ಬಂಗಾರ ಬೆಲೆ ಅವಲಂಭಿಸಿದೆ. ಇದರ ಬಡ್ಡಿ ದರ ಏರಿಕೆಯಾದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ ಈಗಿರುವ 900 ಡಾಲರ್ನಿಂದ 1,050 ಡಾಲರ್ ಆಸುಪಾಸಿಗೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ವರದಿ ಮಾಡಿದೆ.
ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪ್ರಸಕ್ತ 10 ಗ್ರಾಂ ಚಿನ್ನದ ಬೆಲೆ ರೂ.27 ಸಾವಿರ ಇದ್ದು, ಇದು 20,500 ವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಇಂಡಿಯಾ ರೇಟಿಂಗ್ಸ್ ಸೂಚನೆ ನೀಡಿದೆ. ಫೆಡರಲ್ ರಿಸರ್ವ್ ಬಡ್ಡಿ ದರ ಪ್ರಮಾಣ ಏರಿಸಿದಲ್ಲಿ ಭಾರತದಲ್ಲಿ ಇದರ ಬೆಲೆ ಶೇ.10ರಿಂದ 25ರಷ್ಟು ಇಳಿಯಲಿದೆ. ಆದರೆ ಇದರಲ್ಲಿ ವಿಳಂಬವಾಗಿ ಜಪಾನ್ ಮತ್ತಿತರ ಐರೋಪ್ಯ ರಾಷ್ಟ್ರಗಳು ಅಸಾಂಪ್ರದಾಯಿಕ ಹಣಕಾಸು ನೀತಿ ಮುಂದುವರಿಸಿದಲ್ಲಿ ಪ್ರತಿ ಔನ್ಸ್ಗೆ 1300ರಿಂದ 1350ಕ್ಕೆ ಏರಲಿದ್ದು, ಚಿನ್ನದ ಬೆಲೆ 29,500ರಿಂದ 30,500 ಏರಲಿದೆ ಎಂದು ಇಂಡಿಯಾ ರೇಟಿಂಗ್ಸ್ ಹೇಳಿದೆ.
ವಿಶ್ವದ ಇತರ ರಾಷ್ಟ್ರಗಳ ಕರೆನ್ಸಿಗಳು ಅಮೇರಿಕದ ಡಾಲರ್ಗಿಂತ ದುರ್ಬಲವಾಗಿದೆ. ಅಮೇರಿಕದ ಕೇಂದ್ರ ಬ್ಯಾಂಕ್ ಬಡ್ಡಿ ದರ ಏರಿಕೆ ಕ್ರಮದ ಅನುಪಸ್ಥಿತಿಯಲ್ಲಿ ಅಮೇರಿಕದ ಡಾಲರ್ ಮತ್ತು ಚಿನ್ನದ ಬೆಲೆ ಬಲಗೊಂಡಿದೆ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.