ನವದೆಹಲಿ: 2019ರೊಳಗೆ ಭಾರತದಲ್ಲಿ 40 ಮಿಲಿಯನ್ ಹೊಸ ವೈ-ಫೈ ಬಳಕೆದಾರರನ್ನು ತಲುಪಲು ಗೂಗಲ್ನ ಪಬ್ಲಿಕ್ ವೈ-ಫೈ ಪ್ರಾಜೆಕ್ಟ್ ಟಾರ್ಗೆಟ್ ರೂಪಿಸಿದೆ. ಇದು ಯಶಸ್ವಿಯಾದರೆ ದೇಶದ ಜಿಡಿಪಿಗೆ ಸುಮಾರು 20 ಬಿಲಿಯನ್ ಡಾಲರ್ ಸೇರ್ಪಡೆಯಾಗುವ ನಿರೀಕ್ಷೆ ಇದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೂಗಲ್ ಇಂಡಿಯಾ ನಿರ್ದೇಶಕ ಕೆ.ಸೂರಿ ಅವರು, ‘ಭಾರತ ಮುಂಬರುವ ಬಿಲಿಯನ್ ಬಳಕೆದಾರರಿಗೆ ಮಾರುಕಟ್ಟೆಯಾಗಲಿದೆ. ವೈ-ಫೈ ದೊಡ್ಡ ಕೇಂದ್ರಿತ ವಲಯ ಮತ್ತು ಈ ಬಳಕೆದಾರರನ್ನು ಕನೆಕ್ಟ್ ಆಗಲು ದೊಡ್ಡ ಅವಕಾಶವೂ ಆಗಿದೆ’ ಎಂದಿದ್ದಾರೆ.
‘ಬಳಕೆದಾರರಿಗೆ ಮುಕ್ತ ಮತ್ತು ವೇಗದ ಲಭ್ಯತೆ ಸಿಕ್ಕರೆ ಅದು ಅವರ ಬದುಕಿನಲ್ಲಿ ಮಾತ್ರವಲ್ಲ ದೇಶದ ಆರ್ಥಿಕತೆಯಲ್ಲೂ ಬಹುದೊಡ್ಡ ಬದಲಾವಣೆ ತರುತ್ತದೆ’ ಎಂದಿದ್ದಾರೆ.
ಭಾರತದ ಸರ್ವತ್ರ ಸಂಪರ್ಕ ಮತ್ತು ಡಿಜಿಟಲ್ ಒಳಗೊಳ್ಳುವಿಕೆಯಲ್ಲಿ ವೈ-ಫೈ ಮಹತ್ವದ ಪಾತ್ರವನ್ನು ನಿಭಾಯಿಸಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.