ನಾಗ್ಪುರ: ಇತ್ತೀಚಿಗೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದು, ಅದು ದೊಡ್ಡ ಸುದ್ದಿ ಆಗಿದ್ದು ಎಲ್ಲರಿರೂ ತಿಳಿದಿರುವ ವಿಚಾರ. ಈಗಿನ ಹೊಸ ವಿಚಾರ ಏನೆಂದರೆ, ಪ್ರಣವ್ ಅವರು ಆರ್ಎಸ್ಎಸ್ ಸಮಾರಂಭದಲ್ಲಿ ಭಾಗಿಯಾದ ಬಳಿಕ ಆರ್ಎಸ್ಎಸ್ ಸೇರಲು ಬಯಸುವವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.
ಪ್ರಣವ್ ಅವರ ಭಾಗಿಯ ಬಳಿಕ ಆರ್ಎಸ್ಎಸ್ ಸೇರುವವರ ಸಂಖ್ಯೆಯಲ್ಲಿ ಐದು ಪಟ್ಟು ಏರಿಕೆಯಾಗಿದೆ, ಅದರಲ್ಲೂ ಬಹುತೇಕ ಅರ್ಜಿಗಳು ಪಶ್ಚಿಮಬಂಗಾಳದಿಂದಲೇ ಬರುತ್ತಿದೆ ಎಂದು ದಕ್ಷಿಣ ಬಂಗಾಳದ ಆರ್ಎಸ್ಎಸ್ ಪ್ರಚಾರ ಪ್ರಮುಖ್ ಬಿಪ್ಲಬ್ ರಾಯ್ ಹೇಳಿದ್ದಾರೆ.
ಪ್ರಣವ್ ಅವರು ಜೂನ್ 7ರಂದು ಸಮಾರಂಭದಲ್ಲಿ ಭಾಗಿಯಾಗಿದ್ದರು, ಅದಕ್ಕೂ ಮುನ್ನ ಅಂದರೆ ಜೂನ್ 6ರಂದು 378 ಆನ್ಲೈನ್ ಅರ್ಜಿಗಳು ಬಂದಿತ್ತು, ಆದರೆ ಬಳಿಕ ಅದು 1,779ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದಿನಕ್ಕೆ 1,200-1,300 ಅರ್ಜಿಗಳು ಆರ್ಎಸ್ಎಸ್ ಸೇರ್ಪಡೆಗಾಗಿ ಬರುತ್ತಿದೆ ಎಂದಿದ್ದಾರೆ.
ಸಂಘದ 92 ವರ್ಷಗಳ ನಿಸ್ವಾರ್ಥ ಸೇವೆ ಹೆಚ್ಚು ಹೆಚ್ಚು ಜನರನ್ನು ಅದರತ್ತ ಬರುವಂತೆ ಮಾಡುತ್ತಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.