ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಯುಎಸ್ನ ಅತೀದೊಡ್ಡ ಪ್ರಕೃತಿ ಚಿಕಿತ್ಸಾ ಕೇಂದ್ರ, ಎಸೆಲ್ ಗ್ರೂಪ್ ಅಮೆರಿಕಾದ YO1 ನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆಗೊಳಿಸಿದರು.
ಅಂತಾರಾಷ್ಟ್ರೀಯ ಯೋಗ ದಿನದಂದು ತನ್ನ ವೆಲ್ನೆಸ್ ಸೆಂಟರ್ನ್ನು ಉದ್ಘಾಟನೆಗೊಳಿಸಲು ನಿರ್ಧರಿಸಿದ ಎಸೆಲ್ ಗ್ರೂಪ್ನ್ನು ಪ್ರಶಂಸಿಸಿದ ಮೋದಿ, ಈ ಸೆಂಟರ್ನಿಂದ ಅಮೆರಿಕಾದಲ್ಲಿ 500 ಜನರಿಗೆ ನೇರ ಉದ್ಯೋಗ, 1500 ಜನರಿಗೆ ಪರೋಕ್ಷ ಉದ್ಯೋಗ ದೊರೆಯಲಿದೆ ಎಂಬುದಕ್ಕೆ ಸಂತಸ ವ್ಯಕ್ತಪಡಿಸಿದರು.
ಈ ವೇಳೆ ತಮ್ಮ ಭಾಷಣದಲ್ಲಿ ಯೋಗದ ಮಹತ್ವವನ್ನು ಸಾರಿದ ಅವರು, ಯೋಗ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ ಎಂದರು.
‘ಯೋಗ ಕಳೆದ 3 ವರ್ಷಗಳಿಂದ ಜನ ಚಳುವಳಿಯಾಗಿ ರೂಪುಗೊಂಡಿದ್ದು, ವಿಶ್ವದ ಒಟ್ಟುಗೂಡಿಸುವಿಕೆಯ ಶಕ್ತಿಯಾಗಿ ಹೊರಹೊಮ್ಮಿದೆ’ ಎಂದು ಬಣ್ಣಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.