ನವದೆಹಲಿ: ಯೋಗವು ಮನುಷ್ಯರನ್ನು ಚಿಂತನೆಯಲ್ಲಿ, ಕೃತಿಯಲ್ಲಿ, ಜ್ಞಾನದಲ್ಲಿ, ಶ್ರದ್ಧೆಯಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ಟ್ವಿಟರ್ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ಅವರು, ‘ಯೋಗ ಪ್ರಾಚೀನ ಯೋಗಿಗಳು ಮನುಕುಲಕ್ಕೆ ನೀಡಿದ ಅತ್ಯದ್ಭುತವಾದ ಕೊಡುಗೆ. ಇದು ದೇಹವನ್ನು ಸದೃಢವಾಗಿಸುವ ವ್ಯಾಯಾಮ ಮಾತ್ರವಲ್ಲ, ಆರೋಗ್ಯ ಭರವಸೆಯ ಪಾಸ್ಪೋರ್ಟ್ ಮತ್ತು ಸದೃಢತೆ ಹಾಗೂ ಆರೋಗ್ಯದ ಕೀಲಿಕೈ’ ಎಂದಿದ್ದಾರೆ.
ಪ್ರಸ್ತುತ ಜಗತ್ತು ಒತ್ತಡ ಸಂಬಂಧಿ ಅನಾರೋಗ್ಯ, ಖಿನ್ನತೆಯಿಂದ ಬಳಲುತ್ತಿದೆ. ಇವುಗಳು ಸೈಲೆಂಟ್ ಕಿಲ್ಲರ್ಗಳಾಗುತ್ತಿವೆ. ಸಕ್ಕರೆ ಕಾಯಿಲೆ, ರಕ್ತದೊತ್ತಡಗಳು ಅತಿಯಾಗಿ ಮಾನವನನ್ನು ಕಾಡುತ್ತಿದೆ. ಇದಕ್ಕೆ ಯೋಗ ಉತ್ತಮ ಔಷಧಿಯಾಗಬಲ್ಲದು. ಪ್ರಶಾಂತತೆ, ಭರವಸೆ, ಬಲಿಷ್ಠತೆ, ಧೈರ್ಯವನ್ನು ಯೋಗ ನೀಡುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.