ನವದೆಹಲಿ: ಅಣೆಕಟ್ಟು ಸುರಕ್ಷತಾ ಮಸೂದೆ 2018ನ್ನು ಸಂಸತ್ತಿನಲ್ಲಿ ಪರಿಚಯಿಸುವ ಬಗೆಗಿನ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಅನುಮೋದನೆಯನ್ನು ನೀಡಿದೆ. ಜಲಾಶಯಗಳ ರಕ್ಷಣೆಗಾಗಿ ಏಕರೂಪ ಸುರಕ್ಷತಾ ಕ್ರಮಗಳ ಅಳವಡಿಕೆಗೆ ಸಂಬಂಧಿಸಿದ ಮಸೂದೆ ಇದಾಗಿದೆ.
ಈ ಮಸೂದೆಯಿಂದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಗಳು ಅಣೆಕಟ್ಟು ಸುರಕ್ಷತೆಯ ಬಗೆಗೆ ಏಕರೂಪ ಕಾರ್ಯವಿಧಾನಗಳನ್ನು ಅಳವಡಿಸಲು ಸಹಕಾರಿಯಾಗುತ್ತದೆ. ಇದರಿಂದ ಅಣೆಕಟ್ಟುಗಳ ಸುರಕ್ಷತೆ ಮತ್ತು ಅದರಿಂದಾಗುವ ಉಪಯೋಗಗಳ ಸಂರಕ್ಷಣೆ ಖಾತ್ರಿಗೊಳ್ಳುತ್ತದೆ. ಮಾನವನ ಜೀವನ, ಜಾನುವಾರು, ಆಸ್ತಿಗಳ ಸಂರಕ್ಷಣೆಯೂ ಇದರಿಂದ ಸಾಧ್ಯವಾಗಲಿದೆ.
ಭಾರತೀಯ ತಜ್ಞರು ಮತ್ತು ಅಂತಾರಾಷ್ಟ್ರೀಯ ತಜ್ಞರೊಂದಿಗೆ ವಿಸ್ತೃತ ಚರ್ಚೆ ಮಾಡಿದ ಬಳಿಕವಷ್ಟೇ ಈ ಮಸೂದೆಯ ಕರಡು ಅಂತಿಮವಾಗಿದೆ.
ಅಣೆಕಟ್ಟುಗಳಲ್ಲಿ ಸಮರ್ಪಕ ಕಣ್ಗಾವಲು, ಪರಿಶೀಲನೆ, ಕಾರ್ಯಾಚರಣೆ, ನಿರ್ವಹಣೆಗಳನ್ನು ಈ ಮಸೂದೆ ಪ್ರತಿಪಾದಿಸಿದೆ. ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಮಂಡಳಿ ರಚನೆಗೂ ಪ್ರಸ್ತಾಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.