ಮುಂಬಯಿ: ಕೀನ್ಯಾದ ವಿರುದ್ಧ ಫುಟ್ಬಾಲ್ ಇಂಟರ್ಕಾಂಟಿನೆಂಟಲ್ ಕಪ್ ಮ್ಯಾಚ್ ಆಡಿದ ಭಾರತಕ್ಕೆ ಬೆಂಬಲ ನೀಡಲು ಮುಂಬಯಿ ಸ್ಟೇಡಿಯಂನಲ್ಲಿ ಅಪಾರ ಪ್ರಮಾಣದಲ್ಲಿ ಜಮಾಯಿಸಿದ್ದ ಭಾರತೀಯ ಅಭಿಮಾನಿಗಳಿಗೆ ಫುಟ್ಬಾಲ್ ತಾರೆ ಸುನೀಲ್ ಚೆಟ್ರಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಪಂದ್ಯದಲ್ಲಿ ಭಾರತ 3-0ಗೋಲುಗಳಿಂದ ಜಯ ಗಳಿಸಿದ್ದು, ಚೆಟ್ರಿ ಅವರೇ ಎರಡು ಗೋಲುಗಳನ್ನು ತಂದಿತ್ತಿದ್ದಾರೆ. ಅವರು ಭಾರತದ ಪರವಾಗಿ ಆಡುತ್ತಿರುವ 100ನೇ ಪಂದ್ಯ ಇದಾಗಿತ್ತು.
ಪಂದ್ಯದ ಬಳಿಕ ಮಾತನಾಡಿದ ಅವರು, ‘ದೇಶಕ್ಕಾಗಿ ಆಡುವಾಗ ಇದೇ ರೀತಿಯ ಬೆಂಬಲವನ್ನು ಜನರು ನಮಗೆ ನೀಡಿದರೆ ಕ್ರೀಡಾಂಗಣದಲ್ಲಿ ನಮ್ಮ ಜೀವವನ್ನೇ ಸವೆಸಲು ನಾವು ಸಿದ್ಧರಿದ್ದೇವೆ. ಪಂದ್ಯ ನಮಗೆ ವಿಶೇಷ, ಯಾಕೆಂದರೆ ಇಲ್ಲಿ ನಾವು ಒಟ್ಟುಗೂಡಿದ್ದೇವೆ. ನಮಗಾಗಿ ಸ್ಟೇಡಿಯಂನಲ್ಲಿ ಬೆಂಬಲದ ಘೋಷಣೆ ಹಾಕಿದವರಿಗೆ, ಮನೆಯಲ್ಲಿ ಕುಳಿತು ಚಿಯರ್ ಹೇಳಿದವರಿಗೆ ಧನ್ಯವಾದಗಳು’ ಎಂದಿದ್ದಾರೆ.
ಚೈನೀಸ್ ತೈಫೈ ವಿರುದ್ಧದ ಮ್ಯಾಚ್ನಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಇದರಿಂದ ಬೇಸರಗೊಂಡಿದ್ದ ಚೆಟ್ರಿ, ‘ನಮ್ಮನ್ನು ಟೀಕಿಸಿದರೂ ಪರವಾಗಿಲ್ಲ, ಸ್ಟೇಡಿಯಂಗೆ ಬಂದು ನಮ್ಮನ್ನು ವೀಕ್ಷಿಸಿ’ ಎಂದು ಜನರಿಗೆ ಮನವಿ ಮಾಡಿದ್ದರು. ಅವರ ವಿನಮ್ರ ಮನವಿಯನ್ನು ಜನ ಸ್ವೀಕರಿಸಿ ಬೆಂಬಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.