ನವದೆಹಲಿ: ಅಪ್ಘಾನಿಸ್ಥಾನದ ಕ್ರಿಕೆಟ್ ಆಟಗಾರ ರಶೀದ್ ಖಾನ್ ಭಾರೀ ಸುದ್ದಿ ಮಾಡುತ್ತಿದ್ದಾರೆ. ಐಪಿಎಲ್ನಲ್ಲಿ ಹೈದರಾಬಾದ್ ಸನ್ರೈಸರ್ಸ್ ಪರ ಆಡುತ್ತಿರುವ ಇವರಿಗೆ ಭಾರತೀಯ ನಾಗರಿಕತ್ವ ಕೊಡಬೇಕೆಂಬ ಆಗ್ರಹವೂ ಕೆಲವು ಅಭಿಮಾನಿಗಳಿಂದ ಕೇಳಿ ಬಂದಿದೆ. ಇದಕ್ಕೆಲ್ಲಾ ಕಾರಣ ಅವರು ಐಪಿಎಲ್ನಲ್ಲಿ ತೋರಿಸಿರುವ ಅಮೋಘ ಪ್ರದರ್ಶನ.
ಶುಕ್ರವಾರ ಈಡೆನ್ ಗಾರ್ಡನ್ನಲ್ಲಿ ಕೋಲ್ಕತ್ತಾ ನೈಟ್ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಶೀದ್ ಖಾನ್ ತಮ್ಮ ತಂಡವನ್ನು ಬಹುತೇಕ ಏಕಾಂಗಿಯಾಗಿಯೇ ವಿಜಯದತ್ತ ಕೊಂಡಯ್ದಿದ್ದರು. ಅವರ ಈ ಸಾಧನೆಯ ಬಳಿಕ ಟ್ವಿಟರ್ನಲ್ಲಿ ಅವರು ಟ್ರೆಂಡ್ ಆಗಿದ್ದಾರೆ.
ಕೆಲವು ಅಭಿಮಾನಿಗಳು ಅವರಿಗೆ ಭಾರತೀಯ ನಾಗರಿಕತ್ವ ನೀಡಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ಗೆ ಟ್ವಿಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು, ನಾಗರಿಕತ್ವ ಕೊಡುವುದು ಗೃಹ ಸಚಿವಾಲಯದ ಕಾರ್ಯ, ನಮ್ಮದಲ್ಲ ಎಂದಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿರುವ ಅಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರು, ರಶೀದ್ ಖಾನ್ನನ್ನು ನಾವು ಬಿಟ್ಟುಕೊಡುವುದಿಲ್ಲ ಎಂದು ಮೋದಿಗೆ ಟ್ವಿಟ್ ಮಾಡಿದ್ದಾರೆ.
‘ನಮ್ಮ ಹೀರೋ ರಶೀದ್ ಖಾನ್ ಬಗ್ಗೆ ಅಫ್ಘಾನಿಸ್ಥಾನಕ್ಕೆ ಹೆಮ್ಮೆ ಇದೆ. ನಮ್ಮ ಆಟಗಾರರಿಗೆ ಅವರ ಕೌಶಲ್ಯ ಪ್ರದರ್ಶಿಸಲು ವೇದಿಕೆ ಕಲ್ಪಿಸಿದ ಭಾರತೀಯ ಸ್ನೇಹಿತರಿಗೆ ನಮ್ಮ ಧನ್ಯವಾದಗಳು. ಅಫ್ಘಾನಿಸ್ಥಾನದ ಶ್ರೇಷ್ಠತೆಯನ್ನು ರಶೀದ್ ಎಲ್ಲರಿಗೂ ತೋರಿಸಿಕೊಟ್ಟಿದ್ದಾನೆ. ಕ್ರಿಕೆಟ್ಗೆ ಅವನು ಆಸ್ತಿ. ಅವನನ್ನು ನಾವು ಬಿಟ್ಟುಕೊಡುವುದಿಲ್ಲ’ ಎಂದು ಮೋದಿಯವರಿಗೆ ಘನಿ ಟ್ವಿಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.