ಬೆಂಗಳೂರು: ಕರ್ನಾಟಕ ಚುನಾವಣೆ ಮುಕ್ತಾಯವಾದರೂ ಕರ್ನಾಟಕದಲ್ಲಿ ರಾಜಕೀಯ ಹೋರಾಟ ಮುಂದುವರೆದಿದೆ. ಬಿಜೆಪಿ ಏಕೈಕ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತಕ್ಕೆ 9 ಸೀಟುಗಳ ಕೊರತೆ ಇದೆ.
ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ 9 ಸೀಟುಗಳನ್ನು ಬಿಜೆಪಿ ಕೆಲವೇ ಅಂತರದಲ್ಲಿ ಕೈಚೆಲ್ಲಿದೆ. ಕೇವಲ 6,730 ಮತಗಳು ಬಿಜೆಪಿಯತ್ತ ಬಂದಿದ್ದರೆ, ಇಂದು ಕರ್ನಾಟಕದಲ್ಲಿ ಸ್ಥಿರ ಸರ್ಕಾರ ರಚನೆಯಾಗುತ್ತಿತ್ತು.
ಕಾಂಗ್ರೆಸ್ ವಿರುದ್ಧ 9 ಸೀಟುಗಳನ್ನು ಬಿಜೆಪಿ ಅಲ್ಪ ಮತಗಳ ಅಂತರದಿಂದ ಕಳೆದುಕೊಂಡಿದೆ. ಮಸ್ಕಿ, ಹಿರೆಕೆರುರು, ಕುಂದ್ಗೋಲ್, ಎಲ್ಲಾಪುರ, ಬಾದಾಮಿ, ಗದಗ, ಶೃಂಗೇರಿ, ಅಥಣಿ, ಬಳ್ಳಾರಿ ಗ್ರಾಮಾಂತರದಲ್ಲಿ ಬಿಜೆಪಿ ತುಸುವೇ ಅಂತರದಲ್ಲಿ ಸೋತಿದೆ. ಈ ಕ್ಷೇತ್ರಗಳನ್ನು ಗೆದ್ದಿದ್ದರೆ ಇಂದು ಬಿಜೆಪಿಗೆ ಸ್ಪಷ್ಟಬಹುಮತ ಸಿಗುತ್ತಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.