ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸಕ್ರಿಯರಾಗಿರುವ ಉಗ್ರರ ಕಾಲಾವಧಿ ಗಣನೀಯ ಪ್ರಮಾಣದಲ್ಲಿ ಕಳೆದ ಕೆಲ ವರ್ಷಗಳಿಂದ ಕುಸಿಯುತ್ತಿದೆ. ಭದ್ರತಾ ಪಡೆಗಳ ನಡುವಿನ ಉತ್ತಮ ಸಹಕಾರ, ಪ್ರಥಮ ದರ್ಜೆಯ ಗುಪ್ತಚರ ನೆಟ್ವರ್ಕ್, ಉಗ್ರರ ಕಳಪೆ ತರಬೇತಿ ಇದಕ್ಕೆ ಮುಖ್ಯ ಕಾರಣವಾಗಿದೆ ಎನ್ನಲಾಗಿದೆ.
ಕಳೆದ 2-3 ವರ್ಷಗಳಿಂದ ನಿಯೋಜಿತರಾಗುತ್ತಿರುವ ಉಗ್ರರ ಚಟುವಟಿಕೆಯ ಕಾಲಾವಧಿ ಕೆಲವೇ ತಿಂಗಳಲ್ಲಿ ಮುಕ್ತಾಯಗೊಳ್ಳುತ್ತಿದೆ. ಭದ್ರತಾ ಪಡೆಗಳ ಗುಂಡೇಟಿಗೆ ಕೆಲವರು ಬಲಿಯಾಗುತ್ತಿದ್ದಾರೆ, ಕೆಲವರು ಬಂಧಿತರಾಗುತ್ತಿದ್ದಾರೆ. ಕೆಲವರು ಉಗ್ರವಾದ ತೊರೆದು ಶರಣಾಗುತ್ತಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹ್ವಾನ್ ವಾನಿ 6 ವರ್ಷಗಳ ಕಾಲ ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿ 2016ರ ಜುಲೈನಲ್ಲಿ ಗುಂಡೇಟಿಗೆ ಬಲಿಯಾಗಿದ್ದಾನೆ. ಹತ್ಯೆಯಾಗಿರುವ ಆತನ ಸಹಚರರೂ ಕೂಡ 3-4 ವರ್ಷಗಳ ಕಾಲ ಮಾತ್ರ ಉಗ್ರರಾಗಿದ್ದರು. ಕೆಲವು ಉಗ್ರರು ಉಗ್ರರಾದ ಕೆಲವೇ ತಿಂಗಳುಗಳಲ್ಲಿ ಹತರಾಗುತ್ತಿದ್ದಾರೆ.
ಭದ್ರತಾ ಪಡೆಗಳು ಚಾಣಾಕ್ಷ್ಯ ಮತ್ತು ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವುದು ಉಗ್ರರರ ಕಾಲಾವಧಿ ಕುಸಿತಕ್ಕೆ ಪ್ರಬಲವಾದ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.