ಚಾಮರಾಜನಗರ: ಚುನಾವಣಾ ಅಖಾಡವಾಗಿ ಮಾರ್ಪಟ್ಟಿರುವ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಸಮಾವೇಶಕ್ಕೆ ಚಾಮರಾಜನಗರದ ಸಂತೆಮಾರಹಳ್ಳಿಯಿಂದ ಇಂದು ಚಾಲನೆ ದೊರೆತಿದೆ.
ಸಂತೆಮಾರಹಳ್ಳಿಯ ಹೋಬಳಿ ಕೇಂದ್ರದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಕರ್ನಾಟಕದಲ್ಲಿ ಬಿಜೆಪಿ ಅಲೆ ಇಲ್ಲ, ಇಲ್ಲಿ ಬಿಜೆಪಿ ಬಿರುಗಾಳಿ ಇದೆ’ ಎಂದರು.
ಇಂದು 18 ಸಾವಿರ ಗ್ರಾಮಗಳು ವಿದ್ಯುದೀಕರಣಗೊಂಡಿವೆ, ಕಾರ್ಮಿಕರ ಶ್ರಮದ ಫಲ ಇದು. ಅವರಿಗೆ ನನ್ನ ಬಿಗ್ ಸೆಲ್ಯೂಟ್. ನಾವು ಕೇವಲ ವಿದ್ಯುತ್ ನೀಡಿ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ, ಅಲ್ಲಿನ ಅಭಿವೃದ್ಧಿಯತ್ತವೂ ಗಮನ ನೀಡುತ್ತೇವೆ ಎಂದರು.
ಬಿ.ಎಸ್ ಯಡಿಯೂರಪ್ಪನವರು ಕರ್ನಾಟಕದ ಭರವಸೆಯಾಗಿದ್ದು, ಮುಂದಿನ ಸಿಎಂ ಆಗಿ ಹೊರಹೊಮ್ಮಲಿದ್ದಾರೆ ಎಂದ ಅವರು, ದೇಶದ ಇತಿಹಾಸ, ವಂದೇ ಮಾತರಂ ಮಹತ್ವ ಅರಿಯದ ಜನರು ಇಂದು ಕಾಂಗ್ರೆಸ್ನ ನೇತೃತ್ವ ವಹಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಂಸತ್ತಿನಲ್ಲಿ ನಾನು ೧೫ ನಿಮಿಷ ಮಾತನಾಡಿದರೆ ಮೋದಿ ನನ್ನ ಮುಂದೆ ಕುಳಿತುಕೊಳ್ಳಲಾರರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ, ಹೌದು ನಮ್ಮಂತಹ ಬಡಪಾಯಿಗಳು ಅವರಂತಹ ದೊಡ್ಡ ವ್ಯಕ್ತಿ ಮುಂದೆ ಕುಳಿತುಕೊಳ್ಳುವ ಅರ್ಹತೆ ಇಲ್ಲದವರು. 15 ನಿಮಿಷ ಅವರು ಪೇಪರ್ ನೋಡದೆ ಓದಲಿ, ಯಾವ ಭಾಷೆಯಾದರೂ ಪರವಾಗಿಲ್ಲ, ವಿಶ್ವೇಶ್ವರಯ್ಯ ಎಂದು ತಪ್ಪದೆ ಹೇಳಲು ಐದು ಬಾರಿ ಅಭ್ಯಾಸ ಮಾಡಲಿ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.