ಕೋಲ್ಕತಾದ : ಕೋಲ್ಕತಾದಲ್ಲಿ 1982ರಲ್ಲಿ ನಡೆದ ಆನಂದಮಾರ್ಗದ16 ಸನ್ಯಾಸಿಗಳ ಹತ್ಯಾಕಾಂಡದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾ.ಅಮಿತಾವ್ ಲಾಲ್ ಆಯೋಗವು ಎಡಪಂಥೀಯ ನಾಯಕ ಮತ್ತು ಮಾಜಿ ಲೋಕಾಸಭಾ ಸ್ಪೀಕರ್ ಸೋಮನಾಥ ಚಟರ್ಜಿಯವರನ್ನು ವಿಚಾರಣೆಗೊಳಪಡಿಸಲು ಮುಂದಾಗಿದೆ.
1982ರಲ್ಲಿ ಸಿಪಿಎಂ ಬೆಂಬಲಿಗರು ಆನಂದ ಮಾರ್ಗದ 17 ಮಂದಿ ಸನ್ಯಾಸಿ ಮತ್ತು ಸನ್ಯಾಸಿನಿಯರ ಮೇಲೆ ಹಲ್ಲೆ ನಡೆಸಿ ಬಳಿಕ ಅವರನ್ನು ಸಜೀವವಾಗಿ ಸುಟ್ಟು ಹಾಕಿತ್ತು.
ಇದಕ್ಕೂ ಮುನ್ನ ನಡೆದ ಸಿ.ಪಿ.ಎಂ.ಪಕ್ಷದ ಸಮಾವೇಷದಲ್ಲಿ ಆನಂದ ಮರ್ಗದ ಸನ್ಯಾಸಿಗಳು ಮಕ್ಕಳನ್ನು ಕದ್ದೊಯ್ಯುವವರು ಎಂದು ಬಿಂಬಿಸಲಾಗಿತ್ತು. ಅದೇ ಈ ಸಜೀವ ದಹನಕ್ಕೆ ಮೂಲ ಕಾರಣವಾಗಿತ್ತು. ಆ ಸಮಾವೇಷದಲ್ಲಿ ಸೋಮನಾಥ ಚಟರ್ಜಿ ಕೂಡಾ ಭಾಗವಹಿಸಿದ್ದರು ಎಂಬ ಆರೋಪವಿದೆ.
ಆದರೆ ನನಗೆ ಇಂತಹ ಸಮಾವೇಶದಲ್ಲಿ ಪಾಲ್ಗೊಂಡ ಬಗ್ಗೆ ಜ್ಞಾಪಕವಿಲ್ಲ ಎಂದು ಚಟರ್ಜಿ ಹೇಳಿದ್ದಾರೆ. ಆದರೆ ಉಳಿದ ಸಾಕ್ಷಿಗಳು ಸೋಮನಾಥ ಚಟರ್ಜಿ ಇರುವಿಕೆಯನ್ನು ದೃಢಪಡಿಸಿದೆ. ಪ್ರಸಕ್ತ ಸೋಮನಾಥ ಚಟರ್ಜಿ ಅವರಿಗೆ ೮೫ವರ್ಷ ವಯಸ್ಸಾಗಿದೆ.
ತೃಣಮೂಲ ಕಾಂಗ್ರೆಸ್ ಪಕ್ಷ 2011ಕ್ಕೆ ಅಧಿಕಾರಕ್ಕೆ ಬಂದ ನಂತರ ಈ ಘಟನೆಯ ಬಗ್ಗೆ ತನಿಖೆ ನಡೆಸಲು ಆಯೋಗವನ್ನು ರಚಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.