ನವದೆಹಲಿ: ಪಾಕಿಸ್ಥಾನಕ್ಕೆ ತೆರಳಲಿರುವ ಸಿಖ್ ಯಾತ್ರಿಕರನ್ನು ಭೇಟಿಯಾಗಲು ಅಲ್ಲಿರುವ ಭಾರತೀಯ ಹೈಕಮಿಷನರ್ ಮತ್ತು ಕಾನ್ಸುಲರ್ ಟೀಮ್ಗೆ ಅವಕಾಶ ನೀಡದೇ ಇರುವ ಪಾಕಿಸ್ಥಾನದ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ.
ರಾಜತಾಂತ್ರಿಕರನ್ನು ದೌರ್ಜನ್ಯಕ್ಕೀಡು ಮಾಡುವುದನ್ನು ಅಂತ್ಯಗೊಳಿಸುವ ಸಲುವಾಗಿ ಉಭಯ ದೇಶಗಳು ಪರಸ್ಪರ ಸಮ್ಮತಿ ಸೂಚಿಸಿದ ವಾರಗಳ ಬಳಿಕ ಈ ಘಟನೆ ನಡೆದಿರುವುದು ಖೇದಕರ.
ಭಾರತದಿಂದ ಪಾಕಿಸ್ಥಾನದ ಗುರುದ್ವಾರ ಪಂಜಾ ಸಾಹೇಬ್ಗೆ ತೆರಳಿದ ಸಿಖ್ ಯಾತ್ರಿಕರ ತಂಡವನ್ನು ಗುರುದ್ವಾರದ ಆಮಂತ್ರಣದ ಮೇರೆಗೆ ಭೇಟಿಯಾಗಲು ಇಸ್ಲಾಬಾದ್ನಲ್ಲಿನ ಭಾರತದ ಹೈಕಮಿಷನರ್ ಅಜಯ್ ಬಿಸರಿಯ ಬಯಸಿದ್ದರು. ಪಾಕ್ ಅಧಿಕಾರಿಗಳು ಭದ್ರತಾ ಕಾರಣವೊಡ್ಡಿ ಅವರ ಭೇಟಿಯನ್ನು ನಿರಾಕರಿಸಿದ್ದರು.
ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಪಾಕಿಸ್ಥಾನಕ್ಕೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.