ಮುಂಬಯಿ: ಮಹಾರಾಷ್ಟ್ರ ಮೂಲದ 10 ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ಜಗತ್ತಿನ ಅತೀ ಎತ್ತರದ ಮೌಂಟ್ ಎವರೆಸ್ಟ್ನ್ನು ಹತ್ತಲು ಸಜ್ಜಾಗಿದ್ದಾರೆ. ಇವರು ಡಾರ್ಜಿಲಿಂಗ್ನಲ್ಲಿನ ಸರ್ಕಾರಿ ಸ್ವಾಮ್ಯದ ಹಿಮಾಲಯನ್ ಮೌಂಟನೇರಿಂಗ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ.
ಈ ಇನ್ಸ್ಟಿಟ್ಯೂಟ್ನಲ್ಲಿ ಕ್ಯಾಂಪಿಂಗ್ ಬೇಸಿಕ್ಸ್, ಮೌಂಟನೇರಿಂಗ್ ಗೇರ್, ಹವಮಾನಕ್ಕೆ ಒಗ್ಗಿಕೊಳ್ಳುವಿಕೆ, 14 ಸಾವಿರ ಅಡಿ ಎತ್ತರಕ್ಕೇರುವ ದೈಹಿಕ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ.
10 ವಿದ್ಯಾರ್ಥಿಗಳ ಪೈಕಿ 3 ಮಂದಿ ಹುಡುಗಿಯರಾಗಿದ್ದು, 10 ಮತ್ತು 12ನೇ ತರಗತಿಯವರಾಗಿದ್ದಾರೆ. ಗುರುವಾರ ಹಿಮಾಲಯ ಶಿಖರವನ್ನು ಇವರು ಏರಲಿದ್ದು, 8 ವಾರಗಳಲ್ಲಿ ತಮ್ಮ ಮಿಶನ್ ಸಂಪೂರ್ಣಗೊಳಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.